ಇತ್ತೀಚೆಗೆ ಬಿಡುಗಡೆಯಾದ 19.20.21 ಚಿತ್ರದಲ್ಲಿ ನಾಯಕನ ತಂದೆಯ ಪಾತ್ರವನ್ನು ಗಮನಿಸಿರಬಹುದು. ಹೆಚ್ಚು ಮನ ತಟ್ಟಿದ ಪಾತ್ರವದು. ಆ ಕಲಾವಿದ ಮಹಾದೇವ ಹಡಪದ. ರಂಗಭೂಮಿ ಕಲಾವಿದರಾದ ಅವರು ಈಗ ಇನ್ನೊಂದು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹೆಸರು ‘ಫೋಟೊ’.
ರಂಗಭೂಮಿ ಕಲಾವಿದರು ಅಭಿನಯಿಸಿದ ಚಿತ್ರವಿದು. ಈ ಚಿತ್ರ ಅಷ್ಟಾಗಿ ಪ್ರಚಾರದಲ್ಲಿಲ್ಲ. ಆದರೆ ಇದೇ ಚಿತ್ರ ಸದ್ದಿಲ್ಲದೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿದೆ. ಮಾರ್ಚ್ 25ರಂದು ಬೆಳಿಗ್ಗೆ 9.45ಕ್ಕೆ ಒರಾಯನ್ ಮಾಲ್‌ನಲ್ಲಿ, ಮಾರ್ಚ್ 28ರಂದು ಮಧ್ಯಾಹ್ನ 1 ಗಂಟೆಗೆ ಚಾಮರಾಜಪೇಟೆಯ ರಾಜ್‌ಕುಮಾರ್ ಭವನದಲ್ಲಿ ಪ್ರದರ್ಶನಗಳು ನಡೆಯಲಿವೆ.
ಕೊರೊನಾ ಕಾಲಘಟ್ಟದಲ್ಲಿ ಉತ್ತರ ಕರ್ನಾಟಕದಿಂದ ವಲಸೆ ಬಂದಿದ್ದ ಕಾರ್ಮಿಕ ಹಾಗೂ ಅವನ ಮಗ ಎದುರಿಸುವ ಸಮಸ್ಯೆಗಳ ಸುತ್ತ ನಡೆಯುವ ಕಥೆಯಿದು.
ಉತ್ಸವ್ ಗೋನವಾರ ಈ ಚಿತ್ರದ ನಿರ್ದೇಶಕರು. ಜಹಾಂಗೀರ್, ಸಂಧ್ಯಾ ಅರಕೆರೆ, ಡಿಂಗ್ರಿ ನರೇಶ್, ಗಾಯತ್ರಿ ಹೆಗ್ಗೋಡು, ವೀರೇಶ್ ತಾರಾಗಣದಲ್ಲಿದ್ದಾರೆ. ಫಕೀರಪ್ಪ ಬಂಡಿವಾಡ ಚಿತ್ರದ ನಿರ್ಮಾಪಕರು. ದಿನೇಶ್ ದಿವಾಕರನ್ ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿ ಹಿರೇಮಠ್ ಶಬ್ದ ವಿನ್ಯಾಸ, ಶಶಾಂಕ್ ಕೆ.ಎಸ್ ಸಿಂಕ್ ಸೌಂಡ್ ರೆಕಾರ್ಡಿಂಗ್ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.