ಮಂಗಳವಾರ, ಜನವರಿ 26, 2021
16 °C

ಮನೆಯಿಂದಲೇ ಹರಸಿ, ಹಾರೈಸಿ: ಅಭಿಮಾನಿಗಳಿಗೆ ವಿಡಿಯೊ ಮೂಲಕ ನಟ ಯಶ್‌ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕೆಜಿಎಫ್‌’ ಸಿನಿಮಾದ ಮೂಲಕ ಚಂದನವನ ಮಾತ್ರವಲ್ಲ, ಇಡೀ ದೇಶದಾದ್ಯಂತ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ ನಟ ಯಶ್‌. ಜನವರಿ 8 ಈ ನಟ ಹುಟ್ಟುಹಬ್ಬ. ಪ್ರತಿವರ್ಷ ಯಶ್‌ ಹುಟ್ಟುಹಬ್ಬದಂದು ಅಭಿಮಾನಿಗಳು ಅವರ ಮನೆ ಬಳಿ ಬಂದು ಸಂಭ್ರಮ ಆಚರಿಸುತ್ತಿದ್ದರು, ಈ ಬಾರಿ ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್‌2 ಚಿತ್ರದ ಟೀಸರ್ ಕೂಡ ಬಿಡುಗಡೆ ಮಾಡಲಿದೆ ಚಿತ್ರತಂಡ. ಇದು ಯಶ್ ಅಭಿಮಾನಿಗಳಿಗೆ ಡಬ್ಬಲ್ ಸಂಭ್ರಮ ತರಲಿದೆ.

ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ತಮ್ಮ ಹುಟ್ಟುಹಬ್ಬಕ್ಕೆ ಮನೆಯ ಬಳಿ ಸೇರಬೇಡಿ, ನೀವಿರುವಲ್ಲಿಯೇ ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ.

ಆ ವಿಡಿಯೊದಲ್ಲಿ ಯಶ್‌ ‘ನಮಸ್ಕಾರ, ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಒಬ್ಬ ಕಲಾವಿದ ಜೀವನದಲ್ಲಿ ಏನೇ ಆಗಬೇಕು ಎಂದರು ಅದಕ್ಕೆ ಕಾರಣ ಅಭಿಮಾನಿಗಳು. ನನ್ನ ಅಭಿಮಾನಿಗಳು ವಿಶೇಷವಾಗಿ ನನಗೆ ತುಂಬಾನೇ ಕೊಟ್ಟಿದ್ದೀರಾ, ನನ್ನನ್ನು ವಿಶೇಷವಾದ ಸ್ಥಾನದಲ್ಲಿ ಕೂರಿಸಿದ್ದೀರಾ. ನಿಮ್ಮ ಋಣವನ್ನು ನಾನು ಯಾವತ್ತು ತೀರಿಸಲು ಸಾಧ್ಯವಿಲ್ಲ. ಜನವರಿ 8ಕ್ಕೆ ನೀವೆಲ್ಲರೂ ಎಷ್ಟು ಖುಷಿಯಾಗಿ ಕಾಯುತ್ತಿರುತ್ತೀರೋ ನಾನು ಅದಕ್ಕಿಂತ ಹೆಚ್ಚು ಖುಷಿಯಾಗಿ ಕಾಯ್ತಾ ಇರ್ತಿನಿ. ಯಾಕೆಂದರೆ ನಿಮ್ಮೆಲ್ಲರನ್ನೂ ಹತ್ತಿರದಿಂದ ನೋಡಬಹುದು, ಮಾತನಾಡಿಸಬಹುದು ಎಂದು. ಜೀವನದಲ್ಲಿ ಹುಟ್ಟುಹಬ್ಬಕ್ಕೆ ನಾನು ಪ್ರಾಮುಖ್ಯತೆ ಕೊಟ್ಟವನಲ್ಲ. ಆದರೆ ಯಾವಾಗ ನೀವುಗಳು ಅಷ್ಟು ಪ್ರೀತಿಯಿಂದ ನನ್ನ ಹುಟ್ಟುಹಬ್ಬವನ್ನ ಆಚರಿಸಲು ಶುರು ಮಾಡಿದ್ರೊ ಆಗಿನಿಂದ ನಾನು ಖುಷಿಯಾಗಿ ಆ ದಿನಕ್ಕಾಗಿ ಕಾಯಲು ಆರಂಭಿಸಿದೆ. ಆದರೆ ಈ ವರ್ಷ ನಿಮಗೆಲ್ಲರಿಗೂ ತಿಳಿದಿರುವಂತೆ ಕೊರೊನಾ ಕಾರಣದಿಂದ ತುಂಬಾ ಜನ ಸೇರುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದಲ್ಲ. ನಿಮಗೇನಾದ್ರೂ ಆದರೆ, ಅದರಿಂದ ನಿಮ್ಮ ಮನೆಯವರಿಗೆ ತೊಂದರೆ ಆದರೆ ನನಗೆ ತುಂಬಾನೇ ಬೇಸರವಾಗುತ್ತದೆ. ಆ ಕಾರಣಕ್ಕೆ ನೀವು ಎಲ್ಲಿರುತ್ತಿರೋ ಅಲ್ಲಿಂದಲೇ ನನಗೆ ಹರಸಿ, ಹಾರೈಸಿ, ಮನೆಯಿಂದೇ ಆಶೀರ್ವಾದ ಮಾಡಿ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಸಂದೇಶಗಳನ್ನು ಕಳುಹಿಸಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು