‘ಪೊಗರು’ 2ನೇ ಹಂತದ ಶೂಟಿಂಗ್‌ ಆರಂಭ

7

‘ಪೊಗರು’ 2ನೇ ಹಂತದ ಶೂಟಿಂಗ್‌ ಆರಂಭ

Published:
Updated:
Prajavani

ನಟ ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರದ ಎರಡನೇ ಹಂತದ ಶೂಟಿಂಗ್‌ ಹೈದರಾಬಾದ್‌ನಲ್ಲಿ ಇಂದಿನಿಂದ ಶುರುವಾಗಲಿದೆ. ನಂದಕಿಶೋರ್‌ ನಿರ್ದೇಶನದ ಈ ಚಿತ್ರಕ್ಕೆ ಬಿ.ಕೆ. ಗಂಗಾಧರ್‌ ಬಂಡವಾಳ ಹೂಡಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ಶಾನ್ವಿ ಶ್ರೀವಾತ್ಸವ್ ಇದರಲ್ಲಿ ನಟಿಸಿದ್ದಾರೆ.

ರೊಮ್ಯಾಂಟಿಕ್‌ ಆ್ಯಕ್ಷನ್‌ ಚಿತ್ರ ಇದು. ಧ್ರುವ ಸರ್ಜಾ ಎಂಟನೇ ತರಗತಿಯ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ಅವರು ದೈಹಿಕ ಕಸರತ್ತು ನಡೆಸಿ ಎರಡು ತಿಂಗಳಲ್ಲಿ 30 ಕೆಜಿ ತೂಕ ಕಡಿಮೆ ಇಳಿಸಿಕೊಂಡಿದ್ದು, ಸಾಕಷ್ಟು ಸುದ್ದಿಯಾಗಿತ್ತು. ಎರಡನೇ ಹಂತದ ಶೂಟಿಂಗ್‌ ಆರಂಭವಾಗುತ್ತಿರುವುದನ್ನು ಧ್ರುವ ಅವರೇ ವಿಡಿಯೊ ಮೂಲಕ ಖಚಿತಪಡಿಸಿದ್ದಾರೆ.

‘ಪೊಗರು ಚಿತ್ರದ ಶೂಟಿಂಗ್‌ ಆರಂಭವಾಗುತ್ತಿದೆ. ‘ಅದ್ದೂರಿ’, ‘ಬಹದ್ದೂರ್’ ಮತ್ತು ‘ಭರ್ಜರಿ’ ಚಿತ್ರಕ್ಕೆ ನೀವು ಆಶೀರ್ವಾದ ಮಾಡಿದ್ದೀರಿ. ಈ ಚಿತ್ರಕ್ಕೂ ಆಶೀರ್ವಾದ ಮಾಡಿ’ ಎಂದು ಕೋರಿದ್ದಾರೆ.

ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಎಸ್‌. ವೈದ್ಯ ಅವರ ಛಾಯಾಗ್ರಹಣವಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !