ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಂಗಲ್‌ ಹಬ್ಬಕ್ಕೆ ಶುಭ ಕೋರಿದ ತಮಿಳು ನಟ ಸೂರ್ಯ –ಜ್ಯೋತಿಕಾ ದಂಪತಿ

Last Updated 14 ಜನವರಿ 2022, 11:37 IST
ಅಕ್ಷರ ಗಾತ್ರ

ಚೆನ್ನೈ: ಪೊಂಗಲ್‌ ಹಬ್ಬದ ಅಂಗವಾಗಿ ಬಹುಭಾಷಾ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ದಂಪತಿ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ.

ಕಳೆದ ವರ್ಷ ಇನ್‌ಸ್ಟಾಗ್ರಾಂನಲ್ಲಿ ಖಾತೆ ತೆರೆದಿರುವ ಜ್ಯೋತಿಕಾ, ಸಿನಿಮಾ, ಪ್ರವಾಸ, ಹಬ್ಬ ಹಾಗೂ ಸಂಭ್ರಮಾಚರಣೆಯ ಫೋಟೊಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ಪೊಂಗಲ್‌ ಹಬ್ಬದ ಪ್ರಯುಕ್ತ ಪತಿ ಜೊತೆಗಿನ ಫೋಟೊವೊಂದನ್ನು ಹಂಚಿಕೊಂಡಿರುವ ಅವರು, ‘ಎಲ್ಲರಿಗೂ ಸಂಕ್ರಾಂತಿ, ಪೊಂಗಲ್‌ ಹಬ್ಬದ ಶುಭಾಶಯ’ ಎಂದು ಪೋಸ್ಟ್ ಮಾಡಿದ್ದಾರೆ.

ಜ್ಯೋತಿಕಾ ಅವರು ಬಿಳಿ ಸೀರೆಯಲ್ಲಿ ಕಾಣಿಸಿಕೊಂಡರೆ, ಸೂರ್ಯ ನೀಲಿ ಕುರ್ತಾವನ್ನು ಧರಿಸಿರುವುದನ್ನು ಕಾಣಬಹುದು.

ಜ್ಯೋತಿಕಾ 2006 ರಲ್ಲಿ ಸೂರ್ಯ ಅವರನ್ನು ವಿವಾಹವಾಗಿದ್ದರು. ಇವರಿಗೆ ದಿಯಾ ಮತ್ತು ದೇವ್‌ ಎಂಬ ಇಬ್ಬರು ಮಕ್ಕಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT