ಕರಾವಳಿ ಬೆಡಗಿ, ನಟಿ ಪೂಜಾ ಹೆಗ್ಡೆ ಮರಳಿ ಶೂಟಿಂಗ್ಗೆ ಹೋಗುವ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಕ್ರಿಯಾಶೀಲರಾಗಿರುವ ಪೂಜಾ ‘ಕೋವಿಡ್ ಕಾರಣದಿಂದ ಅನೇಕ ತಿಂಗಳುಗಳ ಕಾಲ ಶೂಟಿಂಗ್ಗೆ ವಿರಾಮ ಸಿಕ್ಕಿತ್ತು. ಈಗ ಮರಳಿ ಶೂಟಿಂಗ್ ಸ್ಥಳಕ್ಕೆ ತೆರಳುತ್ತಿರುವುದಕ್ಕೆ ಖುಷಿ ಇದೆ’ ಎಂದಿದ್ದಾರೆ.

ಪೂಜಾ ತಮ್ಮ ಮುಂದಿನ ‘ರಾಧೆ ಶ್ಯಾಮ’ ಚಿತ್ರದ ಶೂಟಿಂಗ್ಗಾಗಿ ಹೈದರಾಬಾದ್ಗೆ ಮರಳಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ರಾಧ ಕೃಷ್ಣ ಕುಮಾರ್ ನಿರ್ದೇಶನವಿದೆ.

ಸದ್ಯದ ಮಾಹಿತಿಯ ಪ್ರಕಾರ ರಾಮೋಜಿ ಫಿಲ್ಮಂ ಸಿಟಿಯಲ್ಲಿ ಈ ಚಿತ್ರತಂಡ ಕೆಲ ದಿನಗಳ ಕಾಲ ಶೂಟಿಂಗ್ ಮಾಡಲಿದೆ. ಅಲ್ಲದೇ ಅಲ್ಲಿನ ಶೆಡ್ಯೂಲ್ ಅನ್ನು ಆದಷ್ಟು ಬೇಗ ಮುಗಿಸುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.

ಮಾರ್ಚ್ನಲ್ಲಿ ಚಿತ್ರತಂಡವು ಜಾರ್ಜಿಯಾದಲ್ಲಿ ಶೂಟಿಂಗ್ ಮಾಡಿತ್ತು. ಆದರೆ ಮಧ್ಯೆದಲ್ಲೇ ಕೋವಿಡ್– 19 ಕಾರಣದಿಂದ ಲಾಕ್ಡೌನ್ ವಿಧಿಸಿದ್ದರಿಂದ ಭಾರತಕ್ಕೆ ಮರಳಿತ್ತು.

ಅಖಿಲ್ ಅಕ್ಕಿನೇನಿ ಅಭಿನಯದ ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಸಿನಿಮಾದಲ್ಲೂ ಪೂಜಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಪೂಜಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.