ಮಂಗಳವಾರ, ಜನವರಿ 25, 2022
24 °C

ಮಹೇಶ್‌ ಬಾಬು ಸಿನಿಮಾದಿಂದ ಹೊರಬಂದ ಪೂಜಾ ಹೆಗ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ತೆಲುಗು ನಟ ಮಹೇಶ್‌ ಬಾಬು ಅವರ ಹೊಸ ಚಿತ್ರದಿಂದ ನಟಿ ಪೂಜಾ ಹೆಗ್ಡೆ ಹೊರಬಂದಿದ್ದಾರೆ.

ಚಿತ್ರೀಕರಣದ ಸಮಯ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗದಿದ್ದಕ್ಕೆ ಮಹೇಶ್‌ ಬಾಬು ಅವರ 28ನೇ ಚಿತ್ರದಿಂದ ಹೊರ ಬಂದಿರುವುದಾಗಿ ಅವರು ಹೇಳಿದ್ದಾರೆ. ಈ ಸಿನಿಮಾವನ್ನು ತ್ರಿವಿಕ್ರಮ್‌ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ.

ಪೂಜಾ ಹೆಗ್ಡೆ ಅವರು ರಾಧೆ–ಶ್ಯಾಮ್‌ ಸೇರಿದಂತೆ ತಮಿಳು ಹಾಗೂ ಬಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿ ಇರುವುದರಿಂದ ಮಹೇಶ್‌ ಬಾಬು ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿ ಇರುವ ಪೂಜಾ ಹೆಗ್ಡೆ ಸಿನಿಮಾವೊಂದಕ್ಕೆ ₹ 3 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. 

ಪೂಜಾ ಹೆಗ್ಡೆ ಅವರ ‘ರಾಧೆ ಶ್ಯಾಮ್, ಸರ್ಕಸ್‌, ಆಚಾರ್ಯ ಹಾಗೂ ಬೀಸ್ಟ್ ಸಿನಿಮಾಗಳು ಬಿಡುಗಡೆಯಾಗುತ್ತಿವೆ,

ಇನ್ನು ಮಹೇಶ್‌ ಬಾಬು ಅವರ  ‘ಸರ್ಕಾರು ವಾರಿ ಪಾಟ’ ಸಿನಿಮಾ ಜನವರಿಯಲ್ಲಿ ಬಿಡುಗಡೆಯಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು