ಎಂಜಿನಿಯರಿಂಗ್ ಮುಗಿಸಿದ ಯುವಕರ ಕೆಲಸ ಹುಡುಕಾಟದ ಕಥೆಯನ್ನು ಹೇಳುವ ‘ಇಂಟರ್ವಲ್’ ಚಿತ್ರದ ಪೋಸ್ಟರ್ ಇತ್ತಿಚೆಗಷ್ಟೇ ಬಿಡುಗಡೆಗೊಂಡಿದೆ. ನಟ ವಿನಯ್ ರಾಜ್‌ಕುಮಾರ್ ಪೋಸ್ಟರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
ಭರತ್ ವರ್ಷ ಆ್ಯಕ್ಷನ್ ಕಟ್ ಹೇಳಿರುವ ಚಿತ್ರ ಬಿಡುಗಡೆಗೆ ಸಿದ್ಧವಿದೆ. ಕಿರುತೆರೆ ನಟ ಶಶಿರಾಜ್ ಚಿತ್ರದ ನಾಯಕ. ‘ಬೆಂಗಳೂರು ಹಾಗೂ ಶಿವಮೊಗ್ಗದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಶೀಘ್ರದಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕರು.
ಐದು ಹಾಡುಗಳಿಗೆ ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನವಿದ್ದು, ಪ್ರಮೋದ್ ಮರವಂತೆ ಹಾಗೂ ಸುಖಿ ಸಾಹಿತ್ಯ ಬರೆದಿದ್ದಾರೆ. ಚಿತ್ರಕ್ಕೆ ರಾಜ್‌ಕಾಂತ್ ಛಾಯಾಚಿತ್ರಗ್ರಹಣ, ಶಶಿಧರ್ ಸಂಕಲನವಿದೆ.