ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾಸ್ ಅಭಿನಯದ ’ಆದಿಪುರುಷ್’ ಚಿತ್ರ ತಂಡದಿಂದ ಹೊಸ ಪೋಸ್ಟರ್ ಬಿಡುಗಡೆ

Last Updated 30 ಮಾರ್ಚ್ 2023, 11:09 IST
ಅಕ್ಷರ ಗಾತ್ರ

ಮುಂಬೈ: ದೇಶದಾದ್ಯಂತ ಚಿತ್ರಪ್ರೇಮಿಗಳಲ್ಲಿ ಚರ್ಚೆ ಹುಟ್ಟುಹಾಕಿರುವ ಚಿತ್ರ ’ಆದಿಪುರುಷ್‌’. ಈ ಸಿನಿಮಾದ ತಂಡವು ಗುರುವಾರ ರಾಮನವಮಿ ಪ್ರಯುಕ್ತ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ.

ರಾಮಾಯಣದ ಕಥೆ ಹೊಂದಿರುವ ’ಆದಿಪುರುಷ್’ ಸಿನಿಮಾವನ್ನು ಓಂ ರಾವುತ್ ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ಬಾಹುಬಲಿ ಖ್ಯಾತಿಯ ಪ್ರಭಾಸ್, ಕೃತಿ ಸನೋನ್ ಹಾಗೂ ಸೈಫ್ ಅಲಿಖಾನ್ ಮೊದಲಾದವರ ತಾರಾಬಳಗವಿದೆ.

ಚಿತ್ರದ ಆಡಿಯೊ ಹಕ್ಕು ಹೊಂದಿರುವ ’ಟಿ–ಸಿರೀಸ್‌’ನ ಅಧಿಕೃತ ಟ್ವಿಟ್ಟರ್ ಖಾತೆಯು ಹೊಸ ಪೋಸ್ಟರ್ ಹಂಚಿಕೊಂಡಿದೆ. ಸಾಮಾನ್ಯವಾಗಿ ಮಂದಿರ, ಕ್ಯಾಲೆಂಡರ್, ಫೋಟೋಗಳಲ್ಲಿರುವ ಕಲಾಕೃತಿಗಳಿಗೆ ಹೋಲಿಕೆಯಾಗಿ ಸೀತೆ, ರಾಮ–ಲಕ್ಷ್ಮಣ, ಹಾಗೂ ಆಂಜನೇಯರು ಪೋಸ್ಟರ್‌ನಲ್ಲಿ ಕಂಡುಬರುತ್ತಾರೆ. ಬಿಲ್ಲು ಬಾಣ ಹಿಡಿದ ರಾಮನಾಗಿ ಪ್ರಭಾಸ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ಹಾಗೂ ಸೀತೆಯಾಗಿ ಕೃತಿ ಜತೆಗೆ ಇವರೆಲ್ಲರಿಗೂ ವಿನಮ್ರವಾಗಿ ಕೈ ಮುಗಿದಿರುವ ಆಂಜನೇಯ ಪಾತ್ರಧಾರಿ ದೇವದತ್ತ ನಾಗೆ ಅವರು ಕಾಣಿಸಿಕೊಂಡಿದ್ದಾರೆ.

ನಿರ್ದೇಶಕರಾದ ರಾವುತ್‌ ಅವರು ಜೂನ್ 16ರಂದು 3ಡಿ ತಂತ್ರಜ್ಞಾನದೊಂದಿಗೆ ’ಆದಿಪುರುಷ್’ ಸಿನಿಮಾವು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಈಗಾಗಲೇ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT