ಬುಧವಾರ, ಡಿಸೆಂಬರ್ 8, 2021
25 °C

ಆ ಹುಡುಗಿ ಬಾತ್‌ರೂಂನಲ್ಲಿ ನಾನೇಕೆ ಇರಲಿ? ಪ್ರಭಾಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುರಿ ಜಗನ್ನಾಥ್‌ ಪುತ್ರ ಆಕಾಶ್ ಪುರಿ ಅಭಿನಯದ ’ರೊಮ್ಯಾಂಟಿಕ್’ ತೆಲುಗು ಸಿನಿಮಾ ದೀಪಾವಳಿಗೆ ಬಿಡುಗಡೆಯಾಗಲಿದ್ದು ಚಿತ್ರದ ಪ್ರಚಾರ ಕಾರ್ಯಕ್ರಮಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸದ್ದು ಮಾಡುತ್ತಿವೆ.

ಸಿನಿಮಾ ಪ್ರಚಾರಕ್ಕೆ ಟಾಲಿವುಡ್‌ನ ಖ್ಯಾತ ನಟ, ನಟಿಯರು ಸೇರಿದಂತೆ ಸ್ಟಾರ್‌ ನಿರ್ದೇಶಕರು ಸಹ ಬರುತ್ತಿದ್ದಾರೆ. ಇತ್ತೀಚೆಗೆ ಬಾಹುಬಲಿ ಖ್ಯಾತಿಯ ಪ್ರಭಾಸ್‌ ಅವರು ಸಿನಿಮಾ ಪ್ರಚಾರದ ನಿಮಿತ್ತ ಸಿನಿಮಾದ ನಾಯಕ ಆಕಾಶ್‌ ಪುರಿ ಹಾಗೂ ನಾಯಕಿ ಕೇತಿಕಾ ಶರ್ಮಾ ಅವರ ಸಂದರ್ಶನ ನಡೆಸಿದ್ದರು. ಈ ವೇಳೆ ಒಂದು ತಮಾಷೆಯ ಘಟನೆ ನಡೆಯಿತು.

ಕೇತಿಕಾ ಉತ್ತಮ ಗಾಯಕಿಯು ಹೌದು ಎಂದು ಆಕಾಶ್‌ ಪ್ರಭಾಸ್‌ಗೆ ಹೇಳುತ್ತಾರೆ. ಹೌದಾ! ಒಂದು ಹಾಡು ಹೇಳಿ ಎಂದು ಪ್ರಭಾಸ್‌ ಕೇತಿಕಾ ಅವರನ್ನು ಕೇಳುತ್ತಾರೆ. ಅದಕ್ಕೆ ಕೇತಿಕಾ ನಾನು ಬಾತ್‌ರೂಂ ಸಿಂಗರ್‌ ಎಂದು ಹೇಳುತ್ತಾರೆ. ಕೇತಿಕಾ ಮಾತಿಗೆ ತಕ್ಷಣ ಪ್ರತಿಕ್ರಿಯಿಸಿದ ಆಕಾಶ್‌ ಪುರಿ 'ಇದನ್ನೆ ಬಾತ್ ರೂಂ ಎಂದು ಕಲ್ಪಿಸಿಕೊ, ಇಲ್ಲಿ ಯಾರೂ ಇಲ್ಲ. ಪ್ರಭಾಸ್ ಮತ್ತು ನಾನು ಕೂಡ ಇಲ್ಲ ಎಂದುಕೊಂಡು ಹಾಡು ಎನ್ನುತ್ತಾರೆ. ತಕ್ಷಣ ಪ್ರತಿಕ್ರಿಯೆ ನೀಡುವ ಪ್ರಭಾಸ್, ನಾನು ಈ ಹುಡುಗಿ ಬಾತ್ ರೂಂನಲ್ಲಿ ಏಕೆ ಇರುತ್ತೇನೆ ಎಂದು ತಮಾಷೆಯಾಗಿ ಪ್ರತಿಕ್ರಿಯಿಸುತ್ತಾರೆ ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಭಿಮಾನಿಗಳಂತೂ ಪ್ರಭಾಸ್‌ ಚುರುಕುತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ರೊಮ್ಯಾಂಟಿಕ್ ಸಿನಿಮಾ ಶುಕ್ರವಾರ (ಅ.29)ರಂದು ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಅನಿಲ್‌ ಅಡೂರಿ ನಿರ್ದೇಶನ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು