ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ | ಮನ ಸೆಳೆದ ಮಲಬಾರ್‌ ಗೋಲ್ಡ್‌

Published 8 ಜೂನ್ 2023, 12:26 IST
Last Updated 8 ಜೂನ್ 2023, 12:26 IST
ಅಕ್ಷರ ಗಾತ್ರ

ಚಿನ್ನಾಭರಣ ಮತ್ತು ಡೈಮಂಡ್ಸ್ ಸಂಗ್ರಹ ಮತ್ತು ಮಾರಾಟದಲ್ಲಿ ಹೆಸರುವಾಸಿಯಾಗಿರುವ ಮಲಬಾರ್‌ ಗೋಲ್ಡ್ ಆ್ಯಂಡ್‌ ಡೈಮಂಡ್ಸ್‌ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಕಾರ್ಯಕ್ರಮದಲ್ಲಿ ಆಕರ್ಷಣೆಯ ಕೇಂದ್ರವಾಯಿತು.

ಸಮಾರಂಭಕ್ಕೆ ಬಂದ ಎಲ್ಲ ಗಣ್ಯರು ರೆಡ್‌ ಕಾರ್ಪೆಟ್‌ ಬಳಿ ಇಟ್ಟಿದ್ದ ಚಿನ್ನ, ಡೈಮಂಡ್ಸ್‌ ಆಭರಣಗಳನ್ನು ವೀಕ್ಷಿಸಿ, ಮೆಚ್ಚುಗೆಯ ಮಾತುಗಳನ್ನು ಆಡಿದರು. 

ಮೂರು ದಶಕಗಳ ಹಿಂದೆ ಕೇರಳದ ಕೋಯಿಕ್ಕೋಡ್‌ನಲ್ಲಿ ಎಂ.ಪಿ. ಅಹಮ್ಮದ್‌ ಆರಂಭಿಸಿದ ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌, ಕ್ರಮೇಣ ಬೆಳೆದ ಪರಿ ಬೆರಗು ಹುಟ್ಟಿಸುಂಥದ್ದು. ಇಂದು ಭಾರತವಲ್ಲದೇ ಅಮೆರಿಕ, ಯುಎಇ, ಸಿಂಗಾಪುರ, ಕುವೈಟ್‌, ಬಹರೇನ್‌, ಒಮಾನ್‌, ಕತಾರ್‌, ಸೌದಿ ಅರೇಬಿಯಾ, ಮಲೇಷ್ಯಾ ಹೀಗೆ ನಾನಾ ದೇಶಗಳಲ್ಲಿ 310ಕ್ಕೂ ಅಧಿಕ ಶೋರೂಂಗಳನ್ನು ಹೊಂದಿದೆ. ಡೈಮಂಡ್‌, ಚಿನ್ನ ಮತ್ತು ಬೆಳ್ಳಿ ಗ್ರಾಹಕರು ಮೊದಲ ಆದ್ಯತೆಯನ್ನು ಮಲಬಾರ್‌ಗೆ ನೀಡಿರುವುದೇ ಈ ಬೆಳವಣಿಗೆಗೆ ಕಾರಣವಾಗಿದೆ.

2005ರಲ್ಲಿ ₹ 500 ಕೋಟಿ ವಹಿವಾಟು ಹೊಂದಿದ್ದ ಮಲಬಾರ್ ಕಂಪನಿ, ಏಳು ವರ್ಷಗಳ ಬಳಿಕ 2012ರಲ್ಲಿ ₹ 12,000 ಕೋಟಿಗೆ ತಲುಪಿತ್ತು. ಆನಂತರ ಒಂದೇ ವರ್ಷದಲ್ಲಿ ₹ 22,000 ಕೋಟಿಗೆ ಏರಿತ್ತು. ಇಲ್ಲಿನ ಗುಣಮಟ್ಟ, ಕಲಾತ್ಮಕ ವಿನ್ಯಾಸ ಗ್ರಾಹಕರನ್ನು ಸೆಳೆದಿದೆ.

ಕರ್ನಾಟಕದಲ್ಲಿ 31 ಶೋರೂಂಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ 14 ಶೋರೂಂಗಳು ಬೆಂಗಳೂರಿನಲ್ಲೇ ಇವೆ. ಅದರ ಜತೆಗೆ ಕೋರಮಂಗಲದಲ್ಲಿ ಇನ್ನೊಂದು ಶೋರೂಂ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳು ಮುಗಿದಿವೆ. ಇದು ರಾಜ್ಯದಲ್ಲಿ 32ನೇ, ಬೆಂಗಳೂರಿನಲ್ಲಿ 15ನೇ ಶೋರೂಂ ಆಗಲಿದೆ.

ಅಭಿಮಾನ ವ್ಯಕ್ತಪಡಿಸಿದ ಪ್ರಾದೇಶಿಕ ಮುಖ್ಯಸ್ಥರು: ಕನ್ನಡಿಗರ ಮೆಚ್ಚಿನ ವಿಶ್ವಾಸಾರ್ಹ ಪತ್ರಿಕೆ ‘ಪ್ರಜಾವಾಣಿ’ ಜತೆಗೆ ಕಾರ್ಯಕ್ರಮ ಆಯೋಜಿಸಲು ಸಿಕ್ಕಿದ ಅವಕಾಶದ ಬಗ್ಗೆ ಮಲಬಾರ್‌ ಗೋಲ್ಡ್‌ನ ಪ್ರಾದೇಶಿಕ ಮುಖ್ಯಸ್ಥರು ಹೆಮ್ಮೆಪಟ್ಟರು.

‘ಆಭರಣ ಕ್ಷೇತ್ರದಲ್ಲಿ ಮಲಬಾರ್‌ ಗೋಲ್ಡ್‌ ತನ್ನದೇ ಆದ ಛಾಪು ಮೂಡಿಸಿದೆ. ಅದೇ ರೀತಿ ಕನ್ನಡ ಪತ್ರಿಕೋದ್ಯಮದಲ್ಲಿ ಪ್ರಜಾವಾಣಿ ತನ್ನ ಬದ್ಧತೆ, ನಿಷ್ಪಕ್ಷಪಾತ ವರದಿಗಳ ಮೂಲಕ ವಿಶಿಷ್ಟ ಸ್ಥಾನ ಹೊಂದಿದೆ. ಅದೇ ಕಾರಣಕ್ಕೆ ಮನೆಮಾತಾಗಿದೆ. ‘ಪ್ರಜಾವಾಣಿ’ಯ ಅಮೃತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರಜಾವಾಣಿ ಸಿನಿ ಸಮ್ಮಾನ ಕಾರ್ಯಕ್ರಮದ ಪ್ರಾಯೋಜಕರಾಗಲು ಅವಕಾಶ ನೀಡಿರುವುದು ಹೆಮ್ಮೆಯ ವಿಚಾರ’ ಎಂದು ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ನ ಪ್ರಾದೇಶಿಕ ಮುಖ್ಯಸ್ಥ ಶರ್ಫುದ್ದೀನ್‌ ಹರ್ಷ ವ್ಯಕ್ತಪಡಿಸಿದರು.

‘ಘನತೆಯ ಪತ್ರಿಕೋದ್ಯಮದ ಜತೆಗೆ ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿರುವ ‘ಪ್ರಜಾವಾಣಿ’ ಸಿನಿಮಾ ರಂಗದ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಲು ‘ಪ್ರಜಾವಾಣಿ ಸಿನಿ ಸಮ್ಮಾನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಖುಷಿಯ ಕೆಲಸ. ಇದಕ್ಕೆ ಮಲಬಾರ್‌ ಗೋಲ್ಡ್‌ ಪ್ರಾಯೋಜಕರಾಗಿರುವುದು ಇನ್ನೂ ಹೆಚ್ಚು ಸಂತೋಷವನ್ನು ನೀಡಿದೆ’ ಎಂದು ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ನ ಪ್ರಾದೇಶಿಕ ಮುಖ್ಯಸ್ಥ ಮನ್ಸೂರ್‌ ಅಭಿಪ್ರಾಯ ಹಂಚಿಕೊಂಡರು.

‘ಮಲಬಾರ್ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ತನ್ನ ವ್ಯವಹಾರದ ಜತೆಗೆ ಜನಸ್ನೇಹಿ, ಗ್ರಾಹಕಸ್ನೇಹಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಮುಂದೆಯೂ ಪ್ರಜಾವಾಣಿ ನಡೆಸುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದೆ’ ಎಂದು ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ನ ಪ್ರಾದೇಶಿಕ ಮುಖ್ಯಸ್ಥ ರಿಬಿನ್‌ ತೌಫಿಕ್‌ ತಿಳಿಸಿದರು.ಹಿತಾ ಚಂದ್ರಶೇಖರ್‌, ನಟಿ

ತಾರೆಯರ ಮಾತುಗಳು
ಯಾರಿಗಾದರೂ ಆಭರಣದ ಗಿಫ್ಟ್‌ ಕೊಡಬೇಕು ಎಂದಾಗ ನೆನಪಾಗುವುದೇ ಮಲಬಾರ್‌ ಜ್ಯುವೆಲ್ಲರಿ. ವಿವಿಧ ಡಿಸೈನ್‌ಗಳ ಮನಸ್ಸಿಗೊಪ್ಪುವ ಆಭರಣಗಳು ಇಲ್ಲಿವೆ.
ಕಿರಣ್‌ರಾಜ್‌ ಕೆ., ನಿರ್ದೇಶಕ
ಆಭರಣ ಧರಿಸುವುದನ್ನು ಎಲ್ಲರೂ ಇಷ್ಟಪಡುತ್ತಾರೆ. ಧರಿಸುವಾಗ ಯಾವ ರೀತಿಯ ಆಭರಣ ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದು ಕೂಡ ಬಹಳ ಮುಖ್ಯ. ಅಂತ ಆಯ್ಕೆ ಮಲಬಾರ್‌ ಗೋಲ್ಡ್‌ನಲ್ಲಿದೆ.
ಎಂ.ಡಿ. ಪಲ್ಲವಿ, ಗಾಯಕಿ
ಆಪದ್ಧನ ಅಂದರೆ ಅದು ಚಿನ್ನ. ಅಲಂಕಾರಕ್ಕೆ ಮಾತ್ರವಲ್ಲ, ಕಷ್ಟ ಕಾಲಕ್ಕೆ ನೆರವಿಗೆ ಬರಲೂ ಚಿನ್ನಾಭರಣ ನಮ್ಮಲ್ಲಿರಬೇಕು. ಅಂಥ ಆಯ್ಕೆಗಳಿಗೆ ಅವಕಾಶ ಇರುವ ಮಳಿಗೆ ಮಲಬಾರ್‌ ಗೋಲ್ಡ್‌.
ಕಿಶೋರ್‌ ಕುಮಾರ್‌, ನಟ
ಸಿನಿಮಾಗಳಲ್ಲಿ ಕಥೆ ಮತ್ತು ಪಾತ್ರಕ್ಕೆ ಅನುಗುಣವಾಗಿ ಆಭರಣಗಳ ಬಳಕೆಯಾಗುತ್ತದೆ. ಯಾವುದೇ ಪಾತ್ರಗಳಿಗೆ ಸೂಕ್ತವಾಗುವ ಕಲಾತ್ಮಕ ಆಭರಣಗಳು ಮಲಬಾರ್‌ ಗೋಲ್ಡ್‌ನಲ್ಲಿ ಇರುವುದು ಸಂತೋಷದ ಸಂಗತಿ.
ಗಿರೀಶ್‌ ಕಾಸರವಳ್ಳಿ, ನಿರ್ದೇಶಕ
ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ಗೆ ಹೋಗುವುದೆಂದರೆ ಒಂದು ಎಕ್ಸೈಟ್‌ಮೆಂಟ್‌. ಕಲಾತ್ಮಕ ಸಂಗ್ರಹವನ್ನು ನೋಡುವುದೇ ಚಂದ.
ಹಿತಾ ಚಂದ್ರಶೇಖರ್‌, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT