ಸಾಕಷ್ಟು ನಟರು ಒಂದಷ್ಟು ಸಿನಿಮಾಗಳ ಬಳಿಕ ನಿರ್ದೇಶನ ಅಥವಾ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದು ಹೊಸತೇನಲ್ಲ. ನಟ ಪ್ರಜ್ವಲ್ ದೇವರಾಜ್ ಅದೇ ಹಾದಿ ಹಾಡಿದ್ದಾರೆ. ತಮ್ಮ ನೂತನ ನಿರ್ಮಾಣ ಸಂಸ್ಥೆಗೆ ಇತ್ತೀಚೆಗಷ್ಟೇ ಚಾಲನೆ ನೀಡಿದ್ದಾರೆ. ತಮ್ಮ ಸಹೋದರ ಪ್ರಣಂ ದೇವರಾಜ್ ಅವರ ‘S/O ಮುತ್ತಣ್ಣ’ ಸಿನಿಮಾ ನಿರ್ಮಾಣ ಮಾಡಿರುವ ಪುರಾತನ ಫಿಲ್ಮ್ಸ್ ಜತೆ ಕೈಜೋಡಿಸಿ ಪ್ರಜ್ವಲ್ ತಮ್ಮ ಮುಂದಿನ ಸಿನಿಮಾವನ್ನು ನಿರ್ಮಿಸಲಿದ್ದಾರೆ.

‘ನಮ್ಮ ಸಂಸ್ಥೆಗೆ P2 ಪ್ರೊಡಕ್ಷನ್ಸ್ ಎಂದು ಹೆಸರಿಡಲಾಗಿದೆ. ಇತ್ತೀಚೆಗಷ್ಟೇ ಪೂಜೆ ಮಾಡಿ ಸಂಸ್ಥೆಯ ಶೀರ್ಷಿಕೆ ಅನಾವರಣ ಮಾಡಿದ್ದೇವೆ. ‘S/O ಮುತ್ತಣ್ಣ’ ಕಥೆಯನ್ನು ತಂದೆ ದೇವರಾಜ್ ಕೇಳಿ ಅಂತಿಮ ಮಾಡಿದ್ದರು. ಅವರ ಆಪ್ತರಾಗಿರುವ ಪುರಾತನ ಫಿಲ್ಮ್ಸ್ನಿಂದ ಇನ್ನಷ್ಟು ಉತ್ತಮ ಸಿನಿಮಾ ನಿರ್ಮಾಣದ ಬಗ್ಗೆ ಈ ಹಿಂದೆ ಹೇಳಿದ್ದೆವು. ಅವರ ಜತೆ ಕೈಜೋಡಿಸಿ ನಮ್ಮ ಮುಂದಿನ ಸಿನಿಮಾಗಳು ನಿರ್ಮಾಣಗೊಳ್ಳಲಿವೆ. ‘S/O ಮುತ್ತಣ್ಣ’ ತಂಡದಿಂದಲೇ ಇನ್ನೊಂದು ಸಿನಿಮಾ ಮಾಡುವ ಆಲೋಚನೆಯಿದೆ’ ಎನ್ನುತ್ತಾರೆ ಪ್ರಜ್ವಲ್.

ಪ್ರಜ್ವಲ್ ಅವರ ‘ಮಾಫಿಯಾ’ ಚಿತ್ರ ಬಿಡುಗಡೆ ಸಿದ್ಧವಿದೆ. ಅವರ ಪತ್ನಿ ರಾಗಿಣಿ ಕೂಡ ನಟನೆಯಲ್ಲಿ ಸಕ್ರಿಯರಾಗಿದ್ದಾರೆ. ಪ್ರಣಂ ಅವರ ಮುಂದಿನ ಚಿತ್ರವನ್ನು ಈ ಸಂಸ್ಥೆ ನಿರ್ಮಿಸಲಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.