ಶನಿವಾರ, ಮೇ 15, 2021
25 °C

ಪ್ರಜ್ವಲ್ ದೇವರಾಜ್ ಜಂಟಲ್‍ಮನ್ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜ್ವಲ್ ದೇವರಾಜ್ ಮತ್ತು ನಿಶ್ವಿಕಾ ನಾಯ್ಡು ನಟನೆಯ ‘ಜಂಟಲ್‍ಮನ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಆರಂಭವಾಗಿವೆ.

ಗುರು ದೇಶಪಾಂಡೆ ನಿರ್ಮಾಣದ ಈ ಚಿತ್ರವನ್ನು ಜಡೇಶ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಕಥೆಯೂ ನಿರ್ದೇಶಕರದ್ದೇ. ಪ್ರಜ್ವಲ್ ದೇವರಾಜ್ ಹಾಗೂ ಸಹ ಕಲಾವಿದರ ಡಾನ್ಸ್‌ ಇರುವ ಹಾಡೊಂದನ್ನು ಇತ್ತೀಚೆಗೆ ಬೆಂಗಳೂರಿನ ಎಚ್ಎಂಟಿ ಫ್ಯಾಕ್ಟರಿ ಬಳಿ ಚಿತ್ರೀಕರಣ ಮಾಡಲಾಗಿದೆ. ನವೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಗುರು ದೇಶಪಾಂಡೆ ತಿಳಿಸಿದ್ದಾರೆ.

‘ಸ್ಲೀಪಿಂಗ್‌ ಬ್ಯೂಟಿ ಸಿಂಡ್ರೋಮ್‌’ ಕಥಾವಸ್ತು ಚಿತ್ರದಲ್ಲಿದೆ. ಕುಂಭ ಕರ್ಣನನ್ನು ಹೋಲುವ ನಾಯಕ 18 ಗಂಟೆ ಕಾಲ ನಿದ್ದೆಯಲ್ಲಿರುತ್ತಾನೆ. ಉಳಿದ ಆರು ಗಂಟೆಗಳಲ್ಲಿ ಅವನ ಚಟುವಟಿಕೆಗಳು ಸಾಗುತ್ತವೆ. ಇದರಲ್ಲಿ ಸಾಹಸ, ಪ್ರೀತಿ, ಭಾವನೆಗಳು ಸಹ ಸಮ್ಮಿಳಿತಗೊಂಡಿವೆ. ಚಿತ್ರದ ಶೇ 60 ಭಾಗದಲ್ಲಿ ಪುಟ್ಟ ಹುಡುಗಿ ಬೇಬಿ ಆರಾಧ್ಯ ಜೊತೆ ನಾಯಕ ನಟಿಸಿದ್ದಾರೆ. ನಿಶ್ವಿಕಾ ನಾಯ್ಡು ಈ ಚಿತ್ರದ ನಾಯಕಿ.  ಅಜನಿಷ್ ಲೋಕನಾಥ್ ಸಂಗೀತ, ಆರೂರ್ ಸುಧಾಕರ್ ಶೆಟ್ಟಿ ಛಾಯಾಗ್ರಹಣ, ವಿನೋದ್ ಹಾಗೂ ಡಿಫರೆಂಟ್ ಡ್ಯಾನಿ ಸಾಹಸವಿದೆ.

ಇದನ್ನೂ ಓದಿ: ‘ಅರ್ಜುನ್ ಗೌಡ’ನ ಆಟ ನವೆಂಬರ್‌ನಲ್ಲಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು