ಶನಿವಾರ, ಆಗಸ್ಟ್ 15, 2020
26 °C

ದೀಪಿಕಾ ನಿರ್ಧಾರಕ್ಕೆ ಅಪ್ಪನ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಇನ್ನೇನು ಕೆಲ ದಿನಗಳಲ್ಲಿ ಬಾಲಿವುಡ್‌ ನಟ ರಣವೀರ್ ಸಿಂಗ್ ಜೊತೆ ಸಪ್ತಪದಿ ತುಳಿಯಲಿರುವ ನಟಿ ದೀಪಿಕಾ ಪಡುಕೋಣೆಯ ಸಾಹಸಮಯ ಕ್ಷಣಗಳ ಬಗ್ಗೆ ಅವರ ತಂದೆ ಪ್ರಕಾಶ್ ಪಡುಕೋಣೆ ನೆನೆದಿದ್ದಾರೆ.

‘ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಡಬೇಕೆಂಬ ಹೆಬ್ಬಯಕೆಯಿಂದ ದೀಪಿಕಾ ತನ್ನ 17ನೇ ವರ್ಷದಲ್ಲಿ ಮುಂಬೈಗೆ ಹೋದಳು. ಆಕೆ ಹೋದ ಮೇಲೆ ನಿದ್ರೆಯಿಲ್ಲದ ಎಷ್ಟೋ ರಾತ್ರಿಗಳನ್ನು ಕಳೆದಿದ್ದೆವು. ಪೋಷಕರಾಗಿ ಆ ಸಮಯ ನಮಗೆ ತುಂಬಾ ಕಷ್ಟಕರವಾಗಿತ್ತು’ ಎಂದು ಪ್ರಕಾಶ್ ಪುಡುಕೋಣೆ ಹೇಳಿದ್ದಾರೆ.

‘ಚಿಕ್ಕ ವಯಸ್ಸಿನ ಮಗಳನ್ನು ಹೊರಗೆ ಕಳುಹಿಸಲು ನಮಗೆ ಭಯವಾಗಿತ್ತು. ಆದರೆ, ಈಗ ಆಕೆ ನಡೆದು ಬಂದ ಹಾದಿಯನ್ನೊಮ್ಮೆ ತಿರುಗಿ ನೋಡಿದರೆ ಹೆಮ್ಮೆಯಾಗುತ್ತದೆ. ಆಕೆ ಅಂದು ತೆಗೆದುಕೊಂಡ ನಿರ್ಧಾರ ಸರಿಯಾದದ್ದು ಎನಿಸುತ್ತದೆ’ ಎಂದು ಹೇಳಿದ್ದಾರೆ.

ಅಪ್ಪನೊಂದಿಗೆ ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿರುವ ದೀ‍ಪಿಕಾ ಪಡುಕೋಣೆ, ‘ಮುಂಬೈಗೆ ಸ್ಥಳಾಂತರಗೊಳ್ಳುವ ನಿರ್ಧಾರ ದೊಡ್ಡದು ಹಾಗೂ ಸವಾಲಿನದ್ದು ಎಂದು ನನಗೆ ಆಗ ಗೊತ್ತಿರಲಿಲ್ಲ. ಆ ಬಗ್ಗೆ ಉತ್ಸುಹಕಳಾಗಿದ್ದ ನನಗೆ ಅದು ಸುಲಭವೂ ಆಗಿತ್ತು. ಆ ನಿರ್ಧಾರವನ್ನು ಈಗ ನೆನದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ’ ಎಂದಿದ್ದಾರೆ.

‘ತಂದೆ–ತಾಯಿಯ ಕಾಳಜಿ ಬಗ್ಗೆ ನನಗೆ ಅರಿವಿತ್ತು. ಅದರೊಟ್ಟಿಗೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲವೂ ಇತ್ತು. ಹೀಗಾಗಿ, ಮುಂಬೈಗೆ ಬಂದೆ. ಆ ಸಮಯದಲ್ಲಿ ನನ್ನ ತಂದೆ–ತಾಯಿ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದಾರೆ ಎಂಬುದು ಗೊತ್ತು. ನಾನು ಎಲ್ಲಿರಬೇಕು ಅಂತಾ ನನಗೆ ತಿಳಿದಿತ್ತು. ಭವಿಷ್ಯದ ಬಗ್ಗೆ ಹಾಗೂ ನಾನು ಕಂಡ ಸಾಧನೆ ಬಗ್ಗೆ ಅಚಲ ನಿರ್ಧಾರ ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ’ ಎಂದು ಹೇಳಿದ್ದಾರೆ.

ಮಾಡೆಲಿಂಗ್ ಕ್ಷೇತ್ರದಲ್ಲಿ ದೀಪಿಕಾ ಪಡುಕೋಣೆಯನ್ನು ಫರ್ಹಾ ಖಾನ್ ಬಾಲಿವುಡ್‌ಗೆ ಪರಿಚಯಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು