ಸಿನಿಮಾಕ್ಕೆ ಒಳ್ಳೆಯ ಹುಡುಗನ ಗುಡ್‌ ಬೈ!

7

ಸಿನಿಮಾಕ್ಕೆ ಒಳ್ಳೆಯ ಹುಡುಗನ ಗುಡ್‌ ಬೈ!

Published:
Updated:
Deccan Herald

ಬಿಗ್‌ ಬಾಸ್‌ ಮೂಲಕ ಕಿರುತೆರೆ ಮೇಲೆ ಕಾಣಿಸಿಕೊಂಡ, ಆ ಮೂಲಕವೇ ಹಿರಿತೆರೆಗೆ ದಾರಿ ಮಾಡಿಕೊಂಡ ಪ್ರಥಮ್ ಸಿನಿಮಾ ಕ್ಷೇತ್ರಕ್ಕೆ ವಿದಾಯ ಹೇಳಲಿದ್ದಾರೆ. ಅಷ್ಟೇ ಅಲ್ಲ, ಅವರು ಬೆಂಗಳೂರು ಜೀವನಕ್ಕೇ ವಿದಾಯ ಹೇಳಲಿದ್ದಾರೆ.

ತಾವು ಅಭಿನಯಿಸಿರುವ ‘ಎಂಎಲ್‌ಎ’ ಚಿತ್ರದ ಬಿಡುಗಡೆ ಕುರಿತು ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ. ಈ ಚಿತ್ರ ನವೆಂಬರ್‌ 9ರಂದು ತೆರೆಗೆ ಬರಲಿದೆ.

‘ನಟಭಯಂಕರ ನನ್ನ ಕೊನೆಯ ಸಿನಿಮಾ ಆಗಲಿದೆ. ಮನೆಯಲ್ಲಿ ನನಗೆ ಮದುವೆ ಮಾಡಿಸಲು ಸಿದ್ಧತೆ ಮಾಡುತ್ತಿದ್ದಾರೆ. ಹಾಗಾಗಿ ನಾನು ಸಿನಿಮಾ ಕ್ಷೇತ್ರದಿಂದ ಹೊರಹೋಗುತ್ತಿದ್ದೇನೆ. ಮದುವೆಗೂ ಮೊದಲೇ ನಾನು ಊರಿನಲ್ಲಿ ಸೆಟಲ್‌ ಆಗಬೇಕು ಎಂದು ನನ್ನ ಅಪ್ಪ ಬಯಸಿದ್ದಾರೆ’ ಎಂದರು ಪ್ರಥಮ್.

‘ನನಗೆ ಬೆಂಗಳೂರು ಜೀವನವೇ ಸಾಕಾಗಿದೆ. ಊರಿನಲ್ಲಿ ಒಂದಿಷ್ಟು ತೆಂಗಿನ ಸಸಿ ನೆಟ್ಟಿದ್ದೇನೆ. ಹಾಗೆಯೇ ಒಂದು ಬ್ಯುಸಿನೆಸ್‌ ಶುರು ಮಾಡುವ ಆಲೋಚನೆ ಇದೆ. ನಾವು ಬೇಡಿಕೆಯಲ್ಲಿ ಇದ್ದಾಗಲೇ ನಿವೃತ್ತಿ ಘೋಷಿಸಿಬಿಡಬೇಕು’ ಎಂದೂ ಅವರು ಹೇಳಿಕೊಂಡರು.

‘ಫೆಬ್ರುವರಿ ನಂತರ ನನ್ನ ಮದುವೆ ಇದೆ’ ಎಂದು ಹೇಳಿಕೊಂಡಿರುವ ಪ್ರಥಮ್, ತಾವು ವರಿಸಲಿರುವ ಹುಡುಗಿ ಯಾರು ಎಂಬುದನ್ನು ಗುಟ್ಟಾಗಿಯೇ ಇರಿಸಿದ್ದಾರೆ. ‘ನಟಭಯಂಕರ’ ಸಿನಿಮಾಗೂ ಮೊದಲೇ ಒಂದು ಸಿನಿಮಾ ಬರಲಿದೆ ಎಂದಿದ್ದಾರೆ. ತಾವು ಬೆಂಗಳೂರು ತೊರೆಯುತ್ತಿರುವ ಬಗ್ಗೆ ಪ್ರಥಮ್ ಅವರು ಹಿಂದೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 11

  Happy
 • 3

  Amused
 • 0

  Sad
 • 1

  Frustrated
 • 7

  Angry

Comments:

0 comments

Write the first review for this !