‘ಏಕ್‌ ಲವ್‌ ಯಾ’: ಇದು ಪ್ರೇಮ್‌ ಹೊಸ ಅವತಾರ

ಶುಕ್ರವಾರ, ಏಪ್ರಿಲ್ 19, 2019
22 °C

‘ಏಕ್‌ ಲವ್‌ ಯಾ’: ಇದು ಪ್ರೇಮ್‌ ಹೊಸ ಅವತಾರ

Published:
Updated:
Prajavani

ಪ್ರೇಮ್‌ ಏನು ಮಾಡಿದರೂ ಸುದ್ದಿಯಾಗುವ ಹಾಗೆಯೇ ಮಾಡುತ್ತಾರೆ. ಹಾಗಾಗಿ ಅವರು ಏನೂ ಮಾಡದೆಯೂ ಕೆಲವೊಮ್ಮೆ ಸುದ್ದಿಯಲ್ಲಿರುತ್ತಾರೆ. ‘ದಿ ವಿಲನ್‌’ ಸಿನಿಮಾ ಸಮಯದಲ್ಲಿಯಂತೂ ಸಾಮಾಜಿಕ ಜಾಲತಾಣದ ಮೀಮ್ಸ್‌ ಪೇಜ್‌ಗಳ ಫೇವರಿಟ್‌ ಆಗಿದ್ದರು. ತಮ್ಮ ಕಾಲೆಳೆದವರ ವಿರುದ್ಧ ಅವರು ಒಮ್ಮೆ ‘ಎಲ್ರನ್ನೂ ನೋಡಿಕೊಳ್ತೇನೆ’ ಎಂದು ಕಿಡಿಕಾರಿದ್ದೂ ಇದೆ.

ಈಗ ‘ವಿಲನ್‌’ ಗುಂಗಿನಿಂದ ಹೊರಬಂದಿರುವ ಪ್ರೇಮ್‌ ‘ಏಕ್‌ ಲವ್‌ ಯಾ’ ಅಂತಿದಾರೆ. ಇದನ್ನು ಉಚ್ಚರಿಸುವುದು ಹೇಗೆ ಎನ್ನುವುದನ್ನೂ ಅವರನ್ನೇ ಕೇಳಬೇಕು. ವಿಲನ್‌ನಲ್ಲಿ ಶಿವಣ್ಣ ಮತ್ತು ಸುದೀಪ್‌ ಜೋಡಿ ಇಟ್ಟುಕೊಂಡು ಆಟವಾಡಿದ್ದ ಪ್ರೇಮ್‌ ಇದೀಗ ಬಾವಮೈದುನ ರಾಣಾ ಅವರನ್ನು ತೆರೆಗೆ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜತೆಗೆ ಸುಧಾರಾಣಿ ಮಗಳು ನಿಧಿ ಕೂಡ ಈ ಚಿತ್ರದ ಮೂಲಕ ನಾಯಕಿಯಾಗಿ ಪರಿಚಿತರಾಗುತ್ತಿದ್ದಾರೆ.

ಇತ್ತೀಚೆಗೆ ಚಿತ್ರ ಫಸ್ಟ್‌ಲುಕ್‌ ಅನ್ನೂ ಬಿಡುಗಡೆ ಮಾಡಿದ್ದಾರೆ ಪ್ರೇಮ್‌. ಆರು ಹೀರೊಗಳನ್ನು ಇಟ್ಟುಕೊಂಡು ಮಾಡುವ ಬಹುಭಾಷಾ ದಾಖಲೆಯ ಚಿತ್ರವನ್ನು ಪಕ್ಕಕ್ಕಿಟ್ಟು ರಾಣಾ ಎಂಬ ನಟನನ್ನು ತಮ್ಮ ಬತ್ತಳಿಕೆಯಿಂದ ತೆಗೆದು ಬಾಣ ಬಿಡುತ್ತಿರುವ ಪ್ರೇಮ್‌ ಅವರನ್ನು ಜನರು ಮೆಚ್ಚಿಕೊಳ್ಳುತ್ತಾರೋ ಅಥವಾ ಮತ್ತೆ ಸಾಮಾಜಿಕ ಜಾಲತಾಣಗಳ ಟ್ರೋಲ್‌ಗೆ ಆಹಾರವಾಗುತ್ತಾರೋ ಎನ್ನುವುದನ್ನು ಕಾದು ನೋಡಬೇಕಷ್ಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !