ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಾ ಆನಂದ್ ಜತೆ ನಟಿಸಿದರೆ ಸಾಯ್ತಾರಾ?

Last Updated 24 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

‘ಗೋಲ್ಡನ್‌ ಸ್ಟಾರ್‌’ ಗಣೇಶ್‌ ಜತೆ ‘ಆರೆಂಜ್’ ಸಿನಿಮಾದಲ್ಲಿ ನಟಿಸಿದ್ದ ಪ್ರಿಯಾ ಆನಂದ್‌ ಈಗ ಕೆಂಡಾಮಂಡಲವಾಗಿದ್ದಾರೆ. ಇದಕ್ಕೆ ಕಾರಣ, ‘ಪ್ರಿಯಾ ಆನಂದ್ ಜೊತೆ ನಟಿಸುವ ನಟ ನಟಿಯರು ಸಾಯುತ್ತಾರೆ, ಅವರ ಪಾಲಿಗೆ ಪ್ರಿಯಾ ನತದೃಷ್ಟೆ’ ಎಂಬ ಟ್ವೀಟ್‌!

‘ಪ್ರಿಯಾ ತಮ್ಮ ಸಹಕಲಾವಿದರಿಗೆ ನತದೃಷ್ಟೆ. ‘ಇಂಗ್ಲಿಷ್‌ ವಿಂಗ್ಲಿಷ್‌’ನಲ್ಲಿ ನಟಿಸಿದ ನಟಿ ಶ್ರೀದೇವಿ ಬೋನಿ ಕಪೂರ್ ಸಾವನ್ನಪ್ಪಿದರು, ‘ಎಲ್‌ಕೆಜಿ’ಯಲ್ಲಿ ನಟಿಸಿದ ಜೆ.ಕೆ. ರಿತೀಶ್‌ ಸಾವನ್ನಪ್ಪಿದರು. ಪ್ರಿಯಾ ಜತೆ ಯಾರೇ ನಟಿಸಿದರೂ ಅವರು ಸಾಯುತ್ತಿದ್ದಾರೆ’ ಎಂದು ವ್ಯಕ್ತಿಯೊಬ್ಬರು ಟ್ವೀಟ್‌ ಮಾಡಿದ್ದರು.

ಇದಕ್ಕೆ ಪ್ರಿಯಾ ಖಾರವಾಗಿಯೇ ಎದಿರೇಟು ನೀಡಿದ್ದಾರೆ. ‘ಸಾಮಾನ್ಯವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಬರುವ ಟೀಕೆಗಳಿಗೆ ನಾನು ಸ್ಪಂದಿಸುವುದಿಲ್ಲ. ಆದರೆ ನೀವು ತೀರಾ ಕೆಳಮಟ್ಟಕ್ಕೆ ಇಳಿದಿದ್ದೀರಿ. ಹಾಗಾಗಿ ನಾನು ನಿಮ್ಮನ್ನು ಇನ್ನೂ ಕೆಳಮಟ್ಟಕ್ಕೆ ಇಳಿಸಲು ಬಯಸುವುದಿಲ್ಲ’ ಎಂದು ಚಾಟಿ ಬೀಸಿದ್ದಾರೆ.

ಕನ್ನಡ, ತಮಿಳು, ಮಲಯಾಳಂ ಮತ್ತು ತೆಲುಗಿನಲ್ಲಿ ತಮ್ಮ ಉತ್ತಮ ಅಭಿನಯದಿಂದ ಗುರುತಿಸಿಕೊಂಡಿದ್ದಾರೆ. ಆದರೆ ತಮ್ಮ ಜತೆ ನಟ ಅಥವಾ ನಟಿಯ ಸಾವಿಗೂ ಅವರಿಗೂ ಥಳಕು ಹಾಕಿರುವುದು ಪ್ರಿಯಾ ಅಭಿಮಾನಿಗಳನ್ನು ಕೆರಳುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT