ಸೋಮವಾರ, ಸೆಪ್ಟೆಂಬರ್ 16, 2019
21 °C

ನಮ್ಮ ನಡುವೆ ಏನಿಲ್ಲ!

Published:
Updated:
Prajavani

ಏನಿಲ್ಲ... ಏನಿಲ್ಲ...ನಮ್ಮ ನಡುವೆ ಏನಿಲ್ಲ... ಇದು ಕಣ್ಣು ಮಿಟುಕಿಸಿ ರಾತ್ರೋರಾತ್ರಿ ದೇಶಾದ್ಯಂತ ಖ್ಯಾತಿಯಾದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರ ಸ್ಪಷ್ಟನೆ.

‘ಒಡು ಅಡಾರ್ ಲವ್’ ಸಹನಟ ರೋಷನ್ ಅಬ್ದುಲ್ ರಾಹೂಫ್ ಮತ್ತು ಪ್ರಿಯಾ ವಾರಿಯರ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಮಾತುಗಳಿಗೆ ಪ್ರಿಯಾ ಕೊನೆಗೂ ಫುಲ್‌ಸ್ಟಾಪ್ ಹಾಕಿದ್ದಾರೆ. ಈಚೆಗೆ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಪ್ರಿಯಾ, ‘ನಮ್ಮಿಬ್ಬರ ನಡುವೆ ಆ ರೀತಿಯ ಯಾವುದೇ ಭಾವನೆಗಳಿಲ್ಲ. ನಾವಿಬ್ಬರೂ ಪ್ರೀತಿಸುತ್ತಿಲ್ಲ’ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

‘ಮೊದಲ ಬಾರಿಗೆ ಇಬ್ಬರೂ ಸಿನಿಮಾವೊಂದರಲ್ಲಿ ಅಭಿನಯಿಸುವಾಗ ಇಂಥ ಸುದ್ದಿಗಳು ಸಹಜವಾಗಿಯೇ ಹಬ್ಬುತ್ತವೆ. ಅದರಲ್ಲೂ ಸಹನಟ ಅಥವಾ ನಟಿಗೂ ಅದು ಮೊದಲನೇ ಸಿನಿಮಾವಾಗಿದ್ದು, ಇಬ್ಬರೂ ಒಂದೇ ವಯಸ್ಸಿನವರಾಗಿದ್ದರೆ ಇಂಥ ಸುದ್ದಿಗಳು ಹರಡುತ್ತವೆ. ಆದರೆ, ಇಬ್ಬರೂ ಒಂದೇ ವಯಸ್ಸಿನವರಾಗಿದ್ದು, ಮೊದಲನೇ ಸಿನಿಮಾವಾಗಿರುವುದರಿಂದ ಪರಸ್ಪರರ ತಪ್ಪುಗಳನ್ನು ಅರಿಯಲು ಸಹಕಾರಿಯಾಗು ವುದಂತೂ ನಿಜ. ಇಬ್ಬರೂ ಯಾವುದೇ ಒತ್ತಡಗಳಿಲ್ಲದೇ ಸಹಜವಾಗಿ ಅಭಿನಯಿಸ ಬಹುದು’ ಎಂದು ಪ್ರಿಯಾ ವಿವರಿಸಿದ್ದಾರೆ. 

‘ಗಾಳಿಸುದ್ದಿಗಳು ಬರೀ ಗಾಳಿಸುದ್ದಿಗಳೇ. ನಿಜ ಗೊತ್ತಾದ ಮೇಲೆ ಆ ಸುದ್ದಿಗಳು ಕಾಣೆಯಾಗುತ್ತವೆ’ ಎಂದಿದ್ದಾರೆ ಪ್ರಿಯಾ. ರೋಷನ್ ಹುಟ್ಟುಹಬ್ಬಕ್ಕೆ ಪ್ರಿಯಾ ಶುಭಾಶಯ ಕೋರಿ ಸಂದೇಶವೊಂದನ್ನು ಹಂಚಿಕೊಂಡಿದ್ದರು. ‘ನನಗಾಗಿ ನೀನು ತೆಗೆದುಕೊಂಡ ರಿಸ್ಕ್‌ಗಳಿಗಾಗಿ ಧನ್ಯವಾದ. ನನ್ನ ಪಾಲಿಗೆ ನೀನು ತುಂಬಾ ಮುಖ್ಯವಾದವನು. ನಿನ್ನ ಮುಖದ ಮೇಲೆ ಸದಾ ನಗು ಹರಡಿರಲಿ. ನಿನ್ನೆಲ್ಲಾ ಭರವಸೆಗಳ ಮೇಲೆ ನನಗೆ ಭರವಸೆ ಇದೆ. ನಿನಗೆ ಒಳಿತಾಗಲಿ...’ ಎನ್ನುವ ಸಂದೇಶವನ್ನು ಪ್ರಿಯಾ ಹಂಚಿಕೊಂಡಿದ್ದೇ ಗಾಳಿಸುದ್ದಿ ಹರಡಲು ಕಾರಣವಾಗಿತ್ತು. 

Post Comments (+)