ಮುಂಬೈ: ‘ಕಣ್ಸನ್ನೆ ಹುಡುಗಿ’ ಖ್ಯಾತಿಯ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವಿಡಿಯೊ ಹಂಚಿಕೊಂಡಿದ್ದು, ಈ ಫೋಟೊಗೆ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಪ್ರಿಯಾ ವಾರಿಯರ್, ಪ್ರವಾಸ, ಹಬ್ಬ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಕ್ಲಿಕ್ಕಿಸಿದ ಫೋಟೊಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ.

ಮಾಲ್ಡೀವ್ಸ್‌ಗೆ ಭೇಟಿ ನೀಡಿರುವ ಅವರು ಅಲ್ಲಿನ ಸುಂದರ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಅಲ್ಲದೇ ನೀಲಿ ಬಣ್ಣದ ಆಕರ್ಷಕ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡಿದೆ. ಸಾಮಾನ್ಯವಾಗಿ ಸಂಪ್ರದಾಯಿಕ ಹಾಗೂ ಟ್ರೆಂಡಿ ಉಡುಗೆಗಳಲ್ಲಿ ಕಾಣಿಸಿಕೊಳ್ಳುವ ಪ್ರಿಯಾ ಇದೀಗ ಬಿಕಿನಿಯಲ್ಲಿ ಗಮನ ಸೆಳೆದಿದ್ದಾರೆ.

ಪ್ರಿಯಾ ವಾರಿಯರ್ ಕಣ್ಣು ಮಿಟುಕಿಸುವ ಮೂಲಕವೇ ರಾತ್ರಿ ಬೆಳಗಾಗುವುದರಲ್ಲಿ ಭಾರತದ ಸೆನ್ಸೆಷನ್ ಹುಡುಗಿ ಎನ್ನಿಸಿಕೊಂಡರು. ‘ಒರು ಅಡಾರ್ ಲವ್’ ಚಿತ್ರದ ‘ಮಾಣಿಕ್ಯ ಮಲರಾಯ ಪೂವಿ’ ಹಾಡಿನ ದೃಶ್ಯದಲ್ಲಿ ಆಕೆ ಕಣ್ಣು ಮಿಟುಕಿಸಿದ್ದು ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹೊತ್ತಿಸಿತ್ತು. ಆ ಕಣ್ಸನ್ನೆಯೇ ದೇಶದಾದ್ಯಂತ ಆಕೆಗೆ ಅಭಿಮಾನಿ ಬಳಗ ಸೃಷ್ಟಿ ಆಗುವಂತೆ ಮಾಡಿತ್ತು.

ಯುಟ್ಯೂಬ್‌ನಲ್ಲಿ ಈಕೆ ಕಣ್ಣು ಮಿಟುಕಿಸಿದ ದೃಶ್ಯಕ್ಕಾಗಿ ಹುಡುಕಾಡಿದ್ದು ದಾಖಲೆಯಾಗಿತ್ತು. ಆ ಮೂಲಕ ಈಕೆ ಸಾಮಾಜಿಕ ಜಾಲತಾಣಗಳಲ್ಲಿ ‘ನ್ಯಾಷನಲ್ ಸೆಲೆಬ್ರೆಟಿ’ ಎನ್ನಿಸಿಕೊಂಡಿದ್ದರು. ಅಲ್ಲದೇ, 2018ರಲ್ಲಿ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಸೆಲೆಬ್ರೆಟಿ ಎಂಬ ಹಿರಿಮೆ ಹೊಂದಿದ್ದಾರೆ.

ಪ್ರಿಯಾ ವಾರಿಯರ್ ಅಭಿನಯದ ಲೈವ್ ಎಂಬ ಚಿತ್ರ ಮೇ 26 ಕ್ಕೆ ಬಿಡುಗಡೆಯಾಗಲಿದೆ. ಸದ್ಯ ಅವರ ಕೈಯಲ್ಲಿ ಹಿಂದಿಯ 3 ಮಂಕೀಸ್, ಯಾರಿಯಾನ್ 2, ಲವ್ ಹ್ಯಾಕರ್ಸ್, ಶ್ರೀದೇವಿ ಬಂಗಲೊ, ಕನ್ನಡದ ವಿಷ್ಣು ಪ್ರಿಯಾ ಚಿತ್ರಗಳಿವೆ. ಇವು ಇನ್ನಷ್ಟೇ ತೆರಕಾಣಬೇಕಿದೆ. ಕನ್ನಡದ ವಿಷ್ಣು ಪ್ರಿಯಾ ಸಿನಿಮಾದಲ್ಲಿ ಪ್ರಿಯಾ ವಾರಿಯರ್ ನಟಿಸುತ್ತಾರೆ ಎಂದು ಸುದ್ದಿಯಿತ್ತು. ಆದರೆ, ಆ ಚಿತ್ರದ ಬಿಡುಗಡೆ ತಡವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.