ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ಗೆ ಕಾಲಿಟ್ಟ ಪ್ರಿಯಾ

Last Updated 24 ಡಿಸೆಂಬರ್ 2018, 19:47 IST
ಅಕ್ಷರ ಗಾತ್ರ

ಮಲಯಾಳಂ ನಟಿ ‘ಇಂಟರ್‌ನೆಟ್‌ ಸೆನ್ಸೇಷನ್‌’, ಮಲೆಯಾಳಿ ನಟಿಪ್ರಿಯಾ ಪ್ರಕಾಶ್‌ ವಾರಿಯರ್ ಬಾಲಿವುಡ್ ಜಮಾನಾ ಇಷ್ಟರಲ್ಲೇ ಶುರುವಾಗಲಿದೆ.ಮಲೆಯಾಳಂ ಚಿತ್ರ ನಿರ್ದೇಶಕ ಪ್ರಕಾಶ್‌ ಮಂಬುಳ್ಳಿ ನಿರ್ದೇಶನದ ‘ಶ್ರೀದೇವಿ ಬಂಗಲೊ’ ಎಂಬ ಹಿಂದಿ ಸಿನಿಮಾದಲ್ಲಿ ಪ್ರಿಯಾ ನಟಿಸುತ್ತಿದ್ದಾರೆ.

ಲಂಡನ್‌ನ ವಿವಿಧೆಡೆ ಚಿತ್ರೀಕರಣ ಭರದಿಂದ ಸಾಗಿದೆ. ಕಳೆದ ವಾರವಷ್ಟೇ ಈ ಸುದ್ದಿಯನ್ನು ಪ್ರಕಾಶ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದಾದ ಬಳಿಕ ಪ್ರಿಯಾ ಜೊತೆಗೆ ಲಂಡನ್‌ನ ಹೋಟೆಲ್‌ ಹಯಾತ್‌ನಲ್ಲಿ ತೆಗೆದ ಫೋಟೊಗಳನ್ನೂ ಅವರು ಪೋಸ್ಟ್‌ ಮಾಡಿದ್ದರು.

ಬಹುಭಾಷಾ ಅಭಿನೇತ್ರಿ ಶ್ರೀದೇವಿ ಅವರ ಜೀವನಕತೆಯುಳ್ಳ ಚಿತ್ರವಿದು. ಪ್ರಿಯಾ, ಶ್ರೀದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಪ್ರಿಯಾ ಅವರನ್ನು ತುಂಬಾ ಗ್ಲಾಮರಸ್‌ ಆಗಿ ಈ ಸಿನಿಮಾದಲ್ಲಿ ನೋಡಬಹುದು’ ಎಂದು ಪ್ರಕಾಶ್‌ ಹೇಳಿದ್ದಾರೆ.

ಪ್ರಕಾಶ್‌ ಅವರ ಆಪ್ತರ ಮಾಹಿತಿ ಪ್ರಕಾರ, ಪ್ರಭುದೇವ್‌ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. 60ರಿಂದ 70 ಕೋಟಿ ರೂಪಾಯಿ ಬಜೆಟ್‌ನ ಚಿತ್ರ ಇದು ಎಂದೂ ಹೇಳಲಾಗಿದೆ.

2018ರಲ್ಲಿ ಗೂಗಲ್‌ ಸರ್ಚ್‌ ಎಂಜಿನ್‌ನಲ್ಲಿ ಅತಿ ಹೆಚ್ಚು ಬಾರಿ ಬಳಕೆಯಾದ ಹೆಸರು ಪ್ರಿಯಾ ಪ್ರಕಾಶ್‌ ಅವರದು. ಕಣ್ಣು ಮಿಟುಕಿಸುವ ವಿಡಿಯೊ ಕಳೆದ ವರ್ಷ ಸಾಮಾಜಿಕ ಜಾಲಣಗಳಲ್ಲಿ ಹರಿದಾಡಲು ಆರಂಭವಾದ ಕ್ಷಣದಿಂದಲೂ ಪ್ರಿಯಾ ಲಕ್ಷಾಂತರ ಮಂದಿ ಅವರ ಅಭಿಮಾನಿಗಳಾಗಿಬಿಟ್ಟರು. ಪ್ರತಿ ನಿತ್ಯ ಅವರ ಫೋಟೊ ಅಥವಾ ಸುದ್ದಿಗಾಗಿ ಅಂತರ್ಜಾಲ ತಾಣದಲ್ಲಿ ಹುಡುಕಾಡುವುದು ಸಾಮಾನ್ಯವಾಗಿ ಹೋಯಿತು.

‘ಸಿಂಬಾ’ದಲ್ಲಿರಣವೀರ್‌ ಸಿಂಗ್‌ಗೆ ಜೋಡಿಯಾಗಿ ಪ್ರಿಯಾ ನಟಿಸಲಿದ್ದಾರೆ ಎಂಬುದು ದೊಡ್ಡ ಸುದ್ದಿಯಾಗಿತ್ತು. ಆ ಅವಕಾಶ ಕೈಗೂಡಿದ್ದಿದ್ದರೆ ಬಾಲಿವುಡ್‌ನಲ್ಲಿ ದೊಡ್ಡ ಬ್ಯಾನರ್‌ ಮತ್ತು ಮುಂಚೂಣಿ ತಾರಾಗಣದೊಂದಿಗೆ ಪ್ರವೇಶ ಪಡೆಯುತ್ತಿದ್ದರು. ಸ್ವಲ್ಪ ವಿಳಂಬವಾದರೂ ನಟಿ ಶ್ರೀದೇವಿ ಬಗೆಗಿನ ಅಭಿಮಾನ ಮತ್ತು ಅನುಕಂಪದಲೆಯೊಂದಿಗೆ ಪ್ರಿಯಾ ಎಂಟ್ರಿ ಕೊಡಲಿದ್ದಾರೆ.

ಹಾಗಾಗಿ, ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಹಲವು ಹೆಗ್ಗಳಿಕೆಗಳು ಪ್ರಿಯಾ ಹೆಗಲೇರಿವೆ. ಆದರೆ ಚಿತ್ರರಂಗದಲ್ಲಿ ಅವರ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT