ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣು ಮಿಟುಕಿಸುವ ಮೂಲಕವೇ ರಾತ್ರಿ ಬೆಳಗಾಗುವುದರಲ್ಲಿ ಭಾರತದ ಸೆನ್ಸೆಷನ್ ಹುಡುಗಿ ಎನ್ನಿಸಿಕೊಂಡವಳು. ‘ವರು ಅಡಾರ್ ಲವ್’ ಚಿತ್ರದ ‘ಮಾಣಿಕ್ಯ ಮಲರಾಯ ಪೂವಿ’ ಹಾಡಿನ ದೃಶ್ಯದಲ್ಲಿ ಆಕೆ ಕಣ್ಣು ಮಿಟುಕಿಸಿದ್ದು ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹೊತ್ತಿಸಿತ್ತು. ಆ ಕಣ್ಸನ್ನೆಯೇ ದೇಶದಾದ್ಯಂತ ಆಕೆಗೆ ಅಭಿಮಾನಿ ಬಳಗ ಸೃಷ್ಟಿಯಾಗುವಂತೆ ಮಾಡಿತ್ತು.

ತನ್ನ ಕಣ್ಸನ್ನೆ ಮೂಲಕ ಬರೀ ಕೇರಳ ಮಾತ್ರವಲ್ಲ ಭಾರತದಾದ್ಯಂತ ಸಿನಿ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ ಖ್ಯಾತಿ ಆಕೆಯದ್ದು.

ಯುಟ್ಯೂಬ್ನಲ್ಲಿ ಈಕೆ ಕಣ್ಣು ಮಿಟುಕಿಸಿದ ದೃಶ್ಯಕ್ಕಾಗಿ ಹುಡುಕಾಡಿದ್ದು ದಾಖಲೆಯಾಗಿತ್ತು. ಆ ಮೂಲಕ ಈಕೆ ಸಾಮಾಜಿಕ ಜಾಲತಾಣಗಳಲ್ಲಿ ‘ನ್ಯಾಷನಲ್ ಸೆಲೆಬ್ರೆಟಿ’ ಎನ್ನಿಸಿಕೊಂಡಿದ್ದರು. ಅಲ್ಲದೇ, 2018ರಲ್ಲಿ ಗೂಗಲ್ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಸೆಲೆಬ್ರೆಟಿ ಎಂಬ ಹಿರಿಮೆ ಹೊಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಿದ್ದ ಪ್ರಿಯಾ ವಾರಿಯರ್ ಇದ್ದಕ್ಕಿದ್ದಂತೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರೀಯಗೊಳಿಸಿದ್ದಾರೆ. ಈ ಖಾತೆಯಲ್ಲಿ ಅವರಿಗೆ ಬರೋಬ್ಬರಿ 7 ಮಿಲಿಯನ್ ಮಂದಿ ಪಾಲೋವರ್ಸ್ ಇದ್ದರು. ಅತಿವೇಗದಲ್ಲಿ 1 ಮಿಲಿಯನ್ ಪಾಲೋವರ್ಸ್ ಹೊಂದಿದ ಭಾರತೀಯ ಸೆಲೆಬ್ರೆಟಿ ಎಂಬ ಖ್ಯಾತಿಯೂ ಅವರಿಗಿತ್ತು.

ಆದರೂ, ಇದ್ದಕ್ಕಿದ್ದಂತೆ ಇನ್ಸ್ಟಾಗ್ರಾಮ್ನಿಂದ ಹೊರ ನಡೆದಿದ್ದೇಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಆ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ ಟ್ರೋಲರ್ ಕಾಟ ಹಾಗೂ ಆನ್ಲೈನ್ ನಿಂದನೆಯೇ ಕಾರಣ ಎಂಬ ಉತ್ತರ ಸಿಕ್ಕಿದೆ. ಆದರೆ ಇದು ನಿಜವೇ ಎಂಬುದನ್ನು ಮಾತ್ರ ಆಕೆಯೇ ಸ್ಪಷ್ಟಪಡಿಸಬೇಕಿದೆ.

20 ವರ್ಷ ವಯಸ್ಸಿನ ಈ ಬೆಡಗಿ ಇದ್ದಕ್ಕಿದ್ದಂತೆ ಇನ್ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದು ಅಭಿಮಾನಿಗಳು ಹಾಗೂ ಪಾರ್ಲೋವರ್ಸ್ಗಳಿಗೆ ಅಚ್ಚರಿ ಮೂಡಿಸಿದೆ, ಜೊತೆಗೆ, ಅಭಿಮಾನಿಗಳು ಇದರಿಂದ ಬೇಸರಗೊಂಡಿದ್ದಾರಂತೆ. ಆದರೆ, ಪ್ರಿಯಾ ಫೇಸ್ಬುಕ್ ಹಾಗೂ ಟಿಕ್ಟಾಕ್ನ ಖಾತೆ ಹೊಂದಿದ್ದು, ಅಭಿಮಾನಿಗಳು ಕೊಂಚ ನಿರಾಳರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.