ಭಾನುವಾರ, ಅಕ್ಟೋಬರ್ 24, 2021
27 °C

ದಿ ಆಕ್ಟಿವಿಸ್ಟ್ ಶೋ: ಭಾಗವಹಿಸಿದ್ದಕ್ಕೆ ಕ್ಷಮೆಯಾಚಿಸಿದ ಪ್ರಿಯಾಂಕಾ ಚೋಪ್ರಾ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ‘ದಿ ಆ್ಯಕ್ಟಿವಿಸ್ಟ್’ ಶೋದಲ್ಲಿ ಭಾಗವಹಿಸಿದ ವಿಚಾರ ವಿವಾದ ಸೃಷ್ಟಿಸುತ್ತಲೇ ನಟಿ ಪ್ರಿಯಾಂಕಾ ಚೋಪ್ರಾ ಕ್ಷಮೆಯಾಚಿಸಿದ್ದಾರೆ.

ಶೋ ಹೋಸ್ಟ್‌ಗಳಲ್ಲಿ ಒಬ್ಬರಾಗಿದ್ದ ನಟಿ ಪ್ರಿಯಾಂಕ ಚೋಪ್ರಾ, ಇಂಟರ್‌ನೆಟ್‌ನಲ್ಲಿ ಜನರಿಂದ ಭಾರೀ ಟೀಕೆ ಎದುರಿಸಿದ್ದರು. ಆರಂಭದಲ್ಲಿ ರಿಯಾಲಿಟಿ ಸ್ಪರ್ಧೆಯ ರೂಪದಲ್ಲಿದ್ದ ‘ದಿ ಆಕ್ಟಿವಿಸ್ಟ್’ ಶೋ, ನಂತರದಲ್ಲಿ ಸ್ವರೂಪ ಬದಲಾಯಿಸಿಕೊಂಡಿತ್ತು ಎಂಬ ಆರೋಪ ಕೇಳಿಬಂದಿತ್ತು.

ಜನರಿಂದ ಪ್ರತಿರೋಧ ಮತ್ತು ಸಾಮಾಜಿಕ ತಾಣಗಳಲ್ಲಿ ಟೀಕೆ ಕೇಳಿಬಂದ ಬಳಿಕ, ದಿ ಆಕ್ಟಿವಿಸ್ಟ್ ಶೋ ಸ್ವರೂಪದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಕಾರ್ಯಕ್ರಮ ಆಯೋಜಕರು ಹೇಳಿದ್ದಾರೆ.

ಪ್ರಿಯಾಂಕ ಚೋಪ್ರಾ, ಉಶೆರ್ ಮತ್ತು ಜ್ಯೂಲಿಯಾನ್ ಹಾಗ್ ಅವರು ದಿ ಆಕ್ಟಿವಿಸ್ಟ್ ಸರಣಿಯಲ್ಲಿ ತೀರ್ಪುಗಾರರಾಗಿ ಪಾಲ್ಗೊಳ್ಳುತ್ತಿದ್ದರು.

ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿರುವುದು ಹಲವರಿಗೆ ಬೇಸರವುಂಟುಮಾಡಿದೆ. ಅದಕ್ಕಾಗಿ ನಾನು ನಿಮ್ಮೆಲ್ಲರ ಕ್ಷಮೆ ಕೇಳುತ್ತಿದ್ದೇನೆ ಎಂದು ಪ್ರಿಯಾಂಕಾ ಅವರು ಪೋಸ್ಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು