ಗುರುವಾರ , ಫೆಬ್ರವರಿ 25, 2021
20 °C

ದಿಯಾ ಹಿಂದಿ ರಿಮೇಕ್‌ನಲ್ಲಿ ಪೃಥ್ವಿ ಅಂಬರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಿಯಾ ಸಿನಿಮಾದಿಂದ ನಟ ಪೃಥ್ವಿ ಅಂಬರ್ ಅದೃಷ್ಟವೇ ಬದಲಾಗಿದೆ. ತುಳು ಸಿನಿಮಾಗಳಲ್ಲಿ ಹೆಸರು ಮಾಡಿದ್ದ ಇವರಿಗೆ ಕನ್ನಡದಲ್ಲಿ ಬ್ರೇಕ್ ಸಿಗುವಂತೆ ಮಾಡಿದ್ದು ದಿಯಾ. ಆ ಒಂದು ಸಿನಿಮಾ ಅವರಿಗೆ ಕನ್ನಡದಲ್ಲಿ ಅನೇಕ ಅವಕಾಶಗಳು ಸಿಗುವಂತೆ ಮಾಡಿತ್ತು. ಸದ್ಯಕ್ಕೆ ಇವರ ಕೈಯಲ್ಲಿ ಅರ್ಧ ಡಜನ್‌ ಸಿನಿಮಾಗಳಿವೆ. ಈ ನಡುವೆ ಬಾಲಿವುಡ್‌ಗೂ ಹಾರಿದ್ದಾರೆ ಪೃಥ್ವಿ. ದಿಯಾ ಹಿಂದಿ ರಿಮೇಕ್ ಇವರು ನಟಿಸಲಿದ್ದಾರೆ.

ಸದ್ಯದ ಸುದ್ದಿಯ ಪ್ರಕಾರ ಹಿಂದಿ ರಿಮೇಕ್‌ಗೆ ಪೃಥ್ವಿ ಈಗಾಗಲೇ ಕೆಲಸ ಶುರು ಮಾಡಿದ್ದಾರೆ. ಈ ಸಿನಿಮಾಕ್ಕೆ ದಿಯಾ ನಿರ್ದೇಶಕ ಕೆ.ಎಸ್‌. ಅಶೋಕ್‌ ಕ್ರಿಯೆಟಿವ್‌ ಹೆಡ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್‌ ಲಕ್ನೊ, ಡೆಹ್ರಡೂನ್‌ ಮುಂತಾದ ಕಡೆ ನಡೆಯಲಿದೆ. ಲಕ್ನೊದಲ್ಲಿ ನಡೆದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಪೃಥ್ವಿ ಫೋಟೊ ಹಂಚಿಕೊಂಡಿದ್ದಾರೆ.

ವಿರ್ಮಶಕರು ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದ ದಿಯಾ ಸಿನಿಮಾ ಕಳೆದ ವರ್ಷ ಒಟಿಟಿ ವೇದಿಕೆಯಲ್ಲಿ ಅದ್ಭುತ ಯಶಸ್ಸು ಗಳಿಸಿತ್ತು. ಸಿನಿಮಾ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರು ಹೊಸಬರ ಪ್ರಯತ್ನಕ್ಕೆ ಚಪ್ಪಾಳೆ ತಟ್ಟಿದ್ದರು. ಬೇರೆ ಬೇರೆ ಭಾಷೆಗಳು ಸಿನಿಮಾ ರಿಮೇಕ್‌ನ ಹಕ್ಕು ಪಡೆದಿವೆ. ಹಿಂದಿ ರಿಮೇಕ್‌ನಲ್ಲಿ ಪೃಥ್ವಿ ಜೊತೆಗೆ ಅನೇಕ ಹೊಸ ಮುಖಗಳು ಕಾಣಿಸಿಕೊಳ್ಳಲಿವೆ. ನಾಯಕಿ ಖುಷಿ ರವಿ ಹಾಗೂ ದೀಕ್ಷಿತ್ ಶೆಟ್ಟಿ ಕೂಡ ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಭಾವನಾತ್ಮಕ ಪ್ರೇಮಕಥೆ ಹೊಂದಿರುವ ದಿಯಾ 2020ರಲ್ಲಿ ಕನ್ನಡದಲ್ಲಿ ಹೆಚ್ಚು ರೇಟಿಂಗ್‌ ಪಡೆದ ಚಿತ್ರವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು