ಸೋಮವಾರ, ಡಿಸೆಂಬರ್ 6, 2021
27 °C

ಕನ್ನಡದ ವೆಬ್‌ ಸರಣಿ ‘ಸೈಕೊ’ ನಾಳೆ ಪ್ರಸಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮ್‌ತೇಜ ನಿರ್ದೇಶನದ ವೆಬ್‌ ಸರಣಿ ‘ಸೈಕೋ’ ಇದೇ 4ರಿಂದ ‘ವಿ4 ಸ್ಟ್ರೀಮ್‌’ ಒಟಿಟಿಯಲ್ಲಿ ಪ್ರಸಾರವಾಗಲಿದೆ.

ಇದು ಬಿಡುಗಡೆಯಾಗುತ್ತಿರುವುದರಲ್ಲಿ ಕನ್ನಡ ವೆಬ್‌ಸರಣಿಯಲ್ಲಿ ಮೊದಲ ವೆಬ್‌ ಸರಣಿ ಎನ್ನುವ ಶ್ರೇಯ ಸಂಪಾದಿಸುತ್ತಿದೆ ಎಂದು ಈ ವೆಬ್‌ ಸರಣಿಯ ನಿರ್ಮಾಣ ತಂಡ ಹೇಳಿಕೊಂಡಿದೆ. ರವಿ ಶಾಮನೂರ್‌ ಫಿಲ್ಮ್ಸ್ ಬ್ಯಾನರ್‌ನಡಿ ಡಾ.ರವಿ ಶಾಮನೂರು ಈ ವೆಬ್‌ ಸರಣಿಗೆ ಬಂಡವಾಳ ಹೂಡಿದ್ದಾರೆ. ಆರು ಎಪಿಸೋಡ್‌ಗಳಲ್ಲಿ ಇದು ಪ್ರಸಾರವಾಗಲಿದೆ.

 

ಬಹುಭಾಷಾ ನಟಿ, ಮಂಗಳೂರಿನ ಬೆಡಗಿ ಸೊನಲ್‌ ಮೊಂತೆರೊ ಈ ವೆಬ್‌ ಸರಣಿಗೆ ಕ್ರಿಯೇಟಿವ್‌ ಡೈರೆಕ್ಟರ್‌ ಆಗಿ ಕೆಲಸ ಮಾಡಿದ್ದಾರೆ. ನಿರ್ಮಾಣ ವಿನ್ಯಾಸ ಚರಣ್‌ ಸುವರ್ಣ ಅವರದು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯೂ ರಾಮ್‌ ತೇಜ ಅವರದೇ.

 

‘ಸಮಸ್ಯಾತ್ಮಾಕ ಬಾಲ್ಯದಿಂದ ಬಂದ ಮಗುವೊಂದು ವಯಸ್ಕನಾಗಿ ಬೆಳೆಯುವ ಹಂತದಲ್ಲಿ ಯಾವ ರೀತಿ ಸೈಕೋ ಆಗಿ ಬದಲಾಗುತ್ತಾನೆ ಎನ್ನುವ ಕಥಾಹಂದರವನ್ನು ಇದು ಒಳಗೊಂಡಿದೆ. ವೃತ್ತಿಯಲ್ಲಿ ಫ್ಯಾಷನ್‌ ಫೋಟೊಗ್ರಾಫರ್‌ ಆಗಿದ್ದರೂ ಆತನೊಳಗಿನ ಮಾನಸಿಕ ಕಾಯಿಲೆಯಿಂದಾಗಿ ಆತ ಯಾವ ರೀತಿ ಸರಣಿ ಕೊಲೆಗಳನ್ನು ಮಾಡಿ, ರಕ್ತದಾಹ ತೀರಿಸಿಕೊಳ್ಳುತ್ತಿರುತ್ತಾನೆ ಎನ್ನುವ ಕ್ರೈಂ ಕಥೆ ಇದರಲ್ಲಿದೆ. ಸಮಸ್ಯೆಯ ಆಳ ಮತ್ತು ಆ ಸಮಸ್ಯೆಗೆ ಪರಿಹಾರವನ್ನು ಸೂಚಿಸುವಂತೆ ಈ ವೆಬ್‌ ಸರಣಿ ಮಾಡಿದ್ದೇವೆ’ ಎನ್ನುತ್ತಾರೆ ಚರಣ್‌ ಸುವರ್ಣ.

‘ಅಗ್ನಿಸಾಕ್ಷಿ‘ ಧಾರಾವಾಹಿಯಲ್ಲಿ ಖಳನ ಪಾತ್ರ ಮಾಡಿದ್ದ ಅಮಿತ್‌ ರಾವ್‌, ನಟಿ ಶ್ರೇಯಾ ಶೆಟ್ಟಿ, ರಸಪೂರಿ ಚಿತ್ರದ ನಿರ್ದೇಶಕ ಮಂಜು ದೈವಜ್ಞ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೆಬ್‌ ಸರಣಿಯನ್ನು ಮಂಗಳೂರು ಸುತ್ತಮುತ್ತವೇ ಚಿತ್ರೀಕರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು