ಸೋಮವಾರ, ಆಗಸ್ಟ್ 2, 2021
20 °C

ನಟ ದಿಲೀಪ್ ಕುಮಾರ್ ಜತೆಗಿನ ಅಣ್ಣಾವ್ರ ನೆನಪು ಹಂಚಿಕೊಂಡ ಪುನೀತ್ ರಾಜ್‌ಕುಮಾರ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Puneet Rajkumar Instagram Post Screengrab

ಬೆಂಗಳೂರು: ಬುಧವಾರ ನಿಧನರಾದ ಬಾಲಿವುಡ್‌ನ ಹಿರಿಯ ನಟ ದಿಲೀಪ್ ಕುಮಾರ್ ಅವರಿಗೆ ಕನ್ನಡ ಚಿತ್ರರಂಗದ ಜತೆಗೂ ಉತ್ತಮ ಬಾಂಧವ್ಯವಿತ್ತು. ಅವರ ಜತೆಗಿನ ಸವಿನೆನಪುಗಳನ್ನು ನಟ ಪುನೀತ್ ರಾಜ್‌ಕುಮಾರ್ ಹಂಚಿಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಕಿರು ವಿಡಿಯೊ ಒಂದನ್ನು ಪೋಸ್ಟ್ ಮಾಡಿರುವ ನಟ ಪುನೀತ್ ರಾಜ್‌ಕುಮಾರ್, ಖ್ಯಾತ ನಟ ದಿಲೀಪ್ ಕುಮಾರ್ ಅವರ ಜತೆಗಿನ ಮರೆಯಲಾಗದ ನೆನಪುಗಳು ಎಂಬ ಅಡಿಬರಹ ಕೂಡ ನೀಡಿದ್ದಾರೆ.

ಸುಮಾರು 30 ಸೆಕೆಂಡುಗಳ ಕಿರು ವಿಡಿಯೊ ಪೋಸ್ಟ್ ಇದಾಗಿದ್ದು, ಅದರಲ್ಲಿ ಕನ್ನಡದ ಖ್ಯಾತ ನಟ ರಾಜ್‌ಕುಮಾರ್ ಜತೆಗೆ ದಿಲೀಪ್ ಕುಮಾರ್ ಇರುವ ಹಾಗೂ ಮತ್ತೊಂದು ಚಿತ್ರದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕೂಡ ಇದ್ದಾರೆ. ಜತೆಗೆ ಪುನೀತ್ ರಾಜ್‌ಕುಮಾರ್ ಚಿಕ್ಕವರಿದ್ದಾಗ ತೆಗೆದ ಚಿತ್ರವನ್ನೂ ಸೇರಿಸಿ ಪೋಸ್ಟ್ ಮಾಡಿದ್ದಾರೆ.

ದಿಲೀಪ್ ಕುಮಾರ್ ಅವರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದ್ದು, ಕನ್ನಡ ಚಿತ್ರರಂಗ ಕೂಡ ದಿಲೀಪ್ ಕುಮಾರ್ ಜತೆಗಿನ ನೆನಪುಗಳನ್ನು ಹಂಚಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು