ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಲೈಗರ್' ಸಿನಿಮಾ ಸೋಲು: ವಿತರಕರಿಗೆ ನಷ್ಟ ಭರಿಸಲು ಪುರಿ ಜಗನ್ನಾಥ್‌ ನಿರ್ಧಾರ

Last Updated 1 ಸೆಪ್ಟೆಂಬರ್ 2022, 7:39 IST
ಅಕ್ಷರ ಗಾತ್ರ

ವಿಜಯ್ ದೇವರಕೊಂಡ ಹಾಗೂ ನಟಿ ಅನನ್ಯಾ ಪಾಂಡೆ ಅಭಿನಯದ 'ಲೈಗರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದೆ. ವಿತರಕರಿಗೆ ನಷ್ಟ ಭರಿಸಲು ನಿರ್ಮಾಪಕ, ನಿರ್ದೇಶಕಪುರಿ ಜಗನ್ನಾಥ್ ನಿರ್ಧಾರ ಮಾಡಿದ್ದಾರೆ.

ಈ ಬಗ್ಗೆ ವಾರಂಗಲ್ ಪ್ರಾಂತ್ಯದ ವಿತರಕ ಶ್ರೀನು ಹೇಳಿದ್ದಾರೆ. ಈ ಸಿನಿಮಾವನ್ನು ಹಂಚಿಕೆ ಮಾಡಿದ್ದರಿಂದ ನನಗೆ ಶೇ. 65ರಷ್ಟು ಬಂಡವಾಳ ನಷ್ಟವಾಗಿದೆ. ಎಲ್ಲಾ ವಿತರಕರನ್ನು ಪುರಿ ಜಗನ್ನಾಥ್‌ ಅವರು ಭೇಟಿ ಮಾಡಿ, ನಷ್ಟ ಭರಿಸಲಿದ್ದಾರೆ. ಇದಕ್ಕಾಗಿ ಅವರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಶ್ರೀನು ಹೇಳಿದ್ದಾರೆ.

ನಾವು ಕೆಲ ದಿನಗಳಲ್ಲಿ ಪುರಿ ಜಗನ್ನಾಥ್‌ ಅವರನ್ನು ಭೇಟಿ ಮಾಡುತ್ತೇನೆ ಎಂದು ಶ್ರೀನು ಹೇಳಿದ್ದಾರೆ. ವಾರಾಂತ್ಯದಲ್ಲೂ ಜನರು ಲೈಗರ್ ಸಿನಿಮಾ ನೋಡಲು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಬಿಡುಗಡೆಗೂ ಮುನ್ನ ‘ಬಾಯ್ಕಾಟ್‌‘ ಅಭಿಯಾನ ಮಾಡುವುದು ಬೇಡ, ಇದರಿಂದ ಸಿನಿಮಾ ಕ್ಷೇತ್ರದಲ್ಲಿರುವ ನೂರಾರು ಬಡ ಕುಟುಂಬಗಳಿಗೆ ತೊಂದರೆಯಾಗುತ್ತಿದೆ ಎಂದು ಶ್ರೀನು ಹೇಳಿದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT