ಟಾಲಿವುಡ್ನಲ್ಲಿ ಜನಪ್ರಿಯತೆ ಪಡೆದಿರುವ ನಟಿ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ ಅವರನ್ನು ಈಗ ಇನ್ಸ್ಟಾಗ್ರಾಮ್ನಲ್ಲಿ 2.5 ಕೋಟಿಗೂ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ನಲ್ಲಿ ರಶ್ಮಿಕಾ ಅವರು ಸಕ್ರಿಯರಾಗಿದ್ದು ಅವರನ್ನು ಸಾಕಷ್ಟು ಜನರು ಫಾಲೋ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಹೆಚ್ಚು ಜನರು ಹಿಂಬಾಲಿಸುತ್ತಿರುವುದಕ್ಕೆ ಅವರು ಸಂತಸದಲ್ಲಿದ್ದಾರೆ.

ಸದ್ಯ ಅವರು ‘ಪುಷ್ಪ’ ಸಿನಿಮಾದ ಗೆಲುವಿನಲ್ಲಿದ್ದಾರೆ. ದಿನದಿಂದ ದಿನಕ್ಕೆ ಅವರ ಜನಪ್ರಿಯತೆ ಹೆಚ್ಚುತ್ತಿದೆ. ಒಂದು ಕಡೆ ಅವರು ಟ್ರೋಲ್ ಆಗುತ್ತಿದ್ದರೂಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಸಿನಿಮಾ ಕಡೆ ಗಮನ ನೀಡುತ್ತಿದ್ದಾರೆ.

READ:'83' ಚಿತ್ರಕ್ಕೆ ಯಾವುದೇ ತೆರಿಗೆ ಇಲ್ಲ: ದೆಹಲಿ ಸರ್ಕಾರ ಘೋಷಣೆ

ಇನ್ಸ್ಟಾಗ್ರಾಮ್ನಲ್ಲಿ 2.5 ಕೋಟಿ ಜನರು ಫಾಲೋ ಮಾಡುತ್ತಿರುವುದಕ್ಕೆ ಅವರು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಇದಕ್ಕಾಗಿ ಅಭಿಮಾನಿಗಳು ಸೇರಿದಂತೆ ಸಿನಿಮಾರಂಗದ ಗಣ್ಯರು ಶುಭಾಶಯ ಕೋರಿದ್ದಾರೆ.

READ:‘83‘ ನೋಡಿ ಬಿಕ್ಕಿಬಿಕ್ಕಿ ಅಳುತ್ತಿದ್ದ ದೀಪಿಕಾಗೆ ಕಬೀರ್ ಖಾನ್ ಹೇಳಿದ್ದೇನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.