ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪೊನ್ನಿಯನ್ ಸೆಲ್ವನ್' ಸೆಟ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಐಶ್ವರ್ಯಾ, ತ್ರಿಷಾ

Last Updated 23 ಸೆಪ್ಟೆಂಬರ್ 2022, 9:18 IST
ಅಕ್ಷರ ಗಾತ್ರ

ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಹಾಗೂ ಬಹುಭಾಷಾ ತಾರೆ ತ್ರಿಷಾ ಅವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಚಿತ್ರವೊಂದು ವೈರಲ್‌ ಆಗಿದೆ.

ಖ್ಯಾತ ನಿರ್ದೇಶಕ ಮಣಿರತ್ನಂ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಬಹುನಿರೀಕ್ಷಿತ 'ಪೊನ್ನಿಯನ್ ಸೆಲ್ವನ್‌' ಸಿನಿಮಾದಲ್ಲಿ ಈ ಒಬ್ಬರೂ ನಟಿಯರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರೀಕರಣದ ವೇಳೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಚಿತ್ರವನ್ನು ತ್ರಿಷಾ ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಐಶ್ವರ್ಯಾ ಅವರು ತ್ರಿಷಾ ಅವರ ಹೆಗಲ ಮೇಲೆ ಕೈ ಇಟ್ಟು, ಸೆಲ್ಫಿ ತೆಗೆಯುತ್ತಿರುವುದು ಚಿತ್ರದಲ್ಲಿದೆ.ತ್ರಿಷಾ ಅವರು ಈ ಚಿತ್ರದೊಂದಿಗೆ ಐಶ್ವರ್ಯಾ ಅವರನ್ನು ಉಲ್ಲೇಖಿಸಿ 'Ash' ಎಂದು ಬರೆದು ಗುರುವಾರ ಶೇರ್‌ ಮಾಡಿಕೊಂಡಿದ್ದಾರೆ.

ಚಿತ್ರವನ್ನು ಈವರೆಗೆ ನಾಲ್ಕು ಲಕ್ಷ ಜನರು ಮೆಚ್ಚಿಕೊಂಡಿದ್ದಾರೆ. ಹಲವರು, ಕ್ವೀನ್ಸ್‌ (ರಾಣಿಯರು) ಎಂದು ಕಾಮೆಂಟ್‌ಮಾಡಿದ್ದಾರೆ.

ಚೋಳ ಸಾಮ್ರಾಜ್ಯದ ಕುರಿತ ಕಥಾಹಂದರ ಹೊಂದಿರುವಈ (ಪೊನ್ನಿಯನ್ ಸೆಲ್ವನ್‌) ಸಿನಿಮಾದ ಮೊದಲ ಭಾಗವನ್ನು ಸೆಪ್ಟೆಂಬರ್‌ 30ರಂದು ಬಿಡುಗಡೆ ಮಾಡಲು ದಿನಾಂಕ ನಿಗದಿಯಾಗಿದೆ.

ವಿಕ್ರಮ್, ಜಯಂ ರವಿ, ಐಶ್ವರ್ಯಾ ರೈ, ತ್ರಿಷಾ, ಕಾರ್ತಿ, ಪ್ರಕಾಶ್‌ ರಾಜ್‌ ಸೇರಿದಂತೆ ಹಲವು ಖ್ಯಾತನಾಮರು ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ.

ಐಶ್ವರ್ಯಾ ರೈ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಂದಿನಿ ಹಾಗೂ ಮಂದಾಕಿನಿ ದೇವಿ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT