ಗುರುವಾರ , ಆಗಸ್ಟ್ 18, 2022
25 °C

ಸರಣಿ ಲೈಂಗಿಕ ಅಪರಾಧ: ಹಾಲಿವುಡ್‌ ಗಾಯಕ ಕೆಲ್ಲಿಗೆ 30 ವರ್ಷ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌: ಅಮೆರಿಕದ ಖ್ಯಾತ ಹಾಲಿವುಡ್‌ ಗಾಯಕ ಆರ್‌.ಕೆಲ್ಲಿಗೆ ಸರಣಿ ಲೈಂಗಿಕ ಅಪರಾಧ ಪ್ರಕರಣದಲ್ಲಿ ಮೂವತ್ತು ವರ್ಷಗಳ ಜೈಲು ಶಿಕ್ಷೆ ಹಾಗೂ ₹ 78 ಲಕ್ಷ ದಂಡ ವಿಧಿಸಲಾಗಿದೆ. 

ಕೆಲ್ಲಿ ವಿರುದ್ಧ ಒಂಬತ್ತು ಸರಣಿ ಲೈಂಗಿಕ ಅಪರಾಧಗಳು ಸಾಬೀತಾಗಿವೆ. ಮೂವರು ಮಕ್ಕಳು ಸೇರಿ 11 ಮಂದಿ ಸಂತ್ರಸ್ತೆಯರು, 45 ಜನರು ಕೆಲ್ಲಿ ವಿರುದ್ಧ ಸಾಕ್ಷಿ ಹೇಳಿರುವುದನ್ನು ಪರಿಗಣಿಸಿ ಶಿಕ್ಷೆ ವಿಧಿಸಲಾಗಿದೆ ಎಂದು ನೂಯಾರ್ಕ್‌ ಸಿಟಿಯ ಬ್ರೂಕ್‌ಲಿನ್ ನ್ಯಾಯಾಲಯ ತಿಳಿಸಿದೆ. ಕೆಲ್ಲಿ ತನ್ನ ಅಭಿಮಾನಿಗಳು ಮಾತ್ರವಲ್ಲದೇ ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಉದ್ಯೋಗ ನೀಡುವುದಾಗಿ ಮತ್ತು ಖ್ಯಾತ ಗಾಯಕಿ ಮಾಡುವುದಾಗಿ ಹೇಳಿ ಕೆಲವು ಮಹಿಳೆಯರಿಗೆ ಆಮೀಷ ಒಡ್ಡಿ ಲೈಂಗಿಕತೆಗೆ ಬಳಸಿಕೊಳ್ಳುತ್ತಿದ್ದರು ಎಂದು ನ್ಯಾಯಾಲಯ ಹೇಳಿದೆ. 

ಎರಡು ವರ್ಷಗಳಿಂದ ಕೆಲ್ಲಿ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಇದೀಗ ಕೆಲ್ಲಿ ಮೇಲಿನ ಆರೋ‍ಪ ಸಾಬೀತಾಗಿದ್ದು 30 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 

ಇದನ್ನೂ ಓದಿ: 

ಯುವತಿಯರನ್ನು ಲೈಂಗಿಕತೆಗಾಗಿ ಉದ್ಯೋಗಕ್ಕೆ ಸೇರಿಸಿಕೊಳ್ಳುತ್ತಿದ್ದ ಎಂಬ ಆರೋಪ ಕೆಲ್ಲಿ ಮೇಲಿತ್ತು. ಕಳೆದ ಹತ್ತು ವರ್ಷಗಳಿಂದ ಕೆಲ್ಲಿ ಲೈಂಗಿಕ ಅಪರಾಧ ಮಾಡುತ್ತಿದ್ದರು ಎಂದು ಅವರ ಪತ್ನಿ ಆಲಿಯಾ ಹೇಳಿದ್ದಾರೆ. ಅವರು ಕೂಡ ಕೆಲ್ಲಿ ವಿರುದ್ಧ ಸಾಕ್ಷಿ ಹೇಳಿದ್ದರು.

ಕೆಲ್ಲಿ ವಿರುದ್ಧ 15 ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ 9 ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿದೆ. ಇನ್ನು ಹಲವಾರು ಯುವತಿಯರಿಗೆ ಕೆಲ್ಲಿ ಲೈಂಗಿಕ ಅಪರಾಧ ಎಸಗಿದ್ದಾರೆ. ಆದರೆ ಅವರು ದೂರು ಕೊಟ್ಟಿಲ್ಲ ಎಂದು ಆಲಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

 ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು