ಪ್ರಭಾಸ್ ಮತ್ತು ಪೂಜಾ ಹೆಗ್ಡೆಯ ಬಹು ನಿರೀಕ್ಷಿತ ಸಿನಿಮಾ ‘ರಾಧೆ ಶ್ಯಾಂ’ ಚಿತ್ರೀಕರಣ ಇತ್ತೀಚೆಗಷ್ಟೇ ಇಟಲಿಯಲ್ಲಿ ನಡೆದಿದ್ದು, ಕಳೆದ ನ.2ರಂದು ಚಿತ್ರ ತಂಡ ಹೈದರಾಬಾದ್ಗೆ ಮರಳಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಸಿನಿಮಾದ ಚಿತ್ರೀಕರಣದ ಅಂತಿಮ ಭಾಗ ಹೈದರಾಬಾದ್ನಲ್ಲಿ ಶುರುವಾಗಲಿದೆ. ಈ ಪಿರೀಯಡ್ ಸಿನಿಮಾದ ಚಿತ್ರೀಕರಣಕ್ಕಾಗಿ ಹೈದರಾಬಾದ್ನ ಖಾಸಗಿ ಸ್ಟುಡಿಯೋ ಒಂದರಲ್ಲಿ ಅದ್ಭುತ ಸೆಟ್ ಹಾಕಲಾಗಿದ್ದು, ಇದೀಗ ಇದರ ಬಗ್ಗೆಯೇ ಎಲ್ಲೆಡೆ ಸುದ್ದಿ ಕೇಳಿ ಬರುತ್ತಿದೆ. ಕ್ಲೈಮ್ಯಾಕ್ಸ್ನ ಚಿತ್ರೀಕರಣದ ಪ್ರಮುಖ ಭಾಗದಲ್ಲಿ ಪ್ರಭಾಸ್ ಭಾಗಿಯಾಗಲಿದ್ದಾರೆ.

ಈ ರೊಮ್ಯಾಂಟಿಕ್ ಪಿರೀಯಡ್ ಸಿನಿಮಾವನ್ನು ತೆಲುಗು ಮತ್ತು ಹಿಂದಿಯಲ್ಲಿ ನಿರ್ಮಿಸಲಾಗುತ್ತಿದ್ದು, ತೆಲುಗಿನಲ್ಲಿ ಕೃಷ್ಣಂರಾಜು ಹಾಗೂ ಹಿಂದಿಯಲ್ಲಿ ಭೂಷಣ್ಕುಮಾರ್ ನಿರ್ಮಾಪಕರು.

ಈ ಅದ್ಧೂರಿ ಸೆಟ್ಗೆ ₹30 ಕೋಟಿ ಖರ್ಚಾಗಿದೆ ಎಂಬ ಮಾತು ಸಿನಿಮಾ ವಲಯದಲ್ಲಿ ಕೇಳಿ ಬರುತ್ತಿದೆ. ಹಾಲಿವುಡ್ನ ಆ್ಯಕ್ಷನ್ ಕೊರಿಯೋಗ್ರಾಫರ್ ನಿಕ್ ಪಾವೆಲ್ ಅವರನ್ನು ಈ ದೃಶ್ಯದ ಚಿತ್ರೀಕರಣಕ್ಕಾಗಿ ಕರೆಸಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ನಿಕ್ ಈ ಹಿಂದೆ ಶಂಕರ್ ನಿರ್ದೇಶನದ ‘2.0’ ಹಾಗೂ ಕಂಗನಾ ರನೌತ್ ಅಭಿನಯದ ‘ಮಣಿಕರ್ಣಿಕಾ’ ಚಿತ್ರಗಳಿಗೆ ಕೊರಿಯೋಗ್ರಾಫ್ ಮಾಡಿದ್ದರು.

ವಿಕ್ರಂ ಆದಿತ್ಯನಾಗಿ ಪ್ರಭಾಸ್ ಹಾಗೂ ಪ್ರೇರಣಾ ಪಾತ್ರದಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದು, ಇದರ ಫಸ್ಟ್ ಲುಕ್ ಪೋಸ್ಟರ್ ವೈರಲ್ ಆಗಿತ್ತು. ಇತ್ತೀಚೆಗೆ ಪ್ರಭಾಸ್ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಡಿಯೊ ಪೋಸ್ಟರ್ ಅನ್ನೂ ಈ ಚಿತ್ರದ ನಿರ್ಮಾಪಕರು ಬಿಡುಗಡೆ ಮಾಡಿದ್ದರು. ‘ರಾಧೆ ಶ್ಯಾಂ’ ಅನ್ನು 1920ರ ಪ್ಯಾರಿಸ್ ನಗರದ ಹಿನ್ನೆಲೆ ಇಟ್ಟುಕೊಂಡು ನಿರ್ಮಿಸಲಾಗಿದ್ದು, ಮುಂದಿನ ವರ್ಷ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.

2018ರಲ್ಲೇ ಸಿನಿಮಾ ಚಿತ್ರೀಕರಣ ಶುರುವಾಗಿತ್ತು. ಹಿರಿಯ ನಟಿ ಭಾಗ್ಯಶ್ರೀ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.