ಇಂದು (ಫೆ.14) ಪ್ರೇಮಿಗಳ ದಿನಾಚರಣೆ. ಪ್ರೇಮಿಗಳೆಲ್ಲಾ ತಮ್ಮ ಸಂಗಾತಿಗೆ ಪ್ರೇಮ ನಿವೇದನೆ ಮಾಡುವ ದಿನ. ಸಾಮಾಜಿಕ ಮಾಧ್ಯಮದಲ್ಲಂತೂ ಪ್ರೇಮಿಗಳು ಹೊಸ ಹೊಸ ಪೋಸ್ಟ್ಗಳನ್ನು ಹಾಕಿ ಸಂಗಾತಿಗಳಿಗೆ, ಪ್ರೀತಿಪಾತ್ರರಿಗೆ ಶುಭ ಹಾರೈಸುತ್ತಿದ್ದಾರೆ. ಈ ವಿಶೇಷ ದಿನದಂದು ಪ್ರೇಮಿಗಳಿಗೆ ಸ್ಪೂರ್ತಿ ಎಂದರೆ ಚಂದನವನದ ಈ ಮುದ್ದಾದ ಜೋಡಿ.

ಅದುವೆ ರಾಧಿಕಾ ಪಂಡಿತ್ ಹಾಗೂ ರಾಕಿಂಗ್ ಸ್ಟಾರ್ ಯಶ್. ಅದೆಷ್ಟೊ ಪ್ರೇಮಿಗಳಿಗೆ ಈ ಜೋಡಿ ಸ್ಪೂರ್ತಿಯಾಗಿದೆ. ಸಿಕ್ಕರೆ ಈ ತರ ಹುಡುಗಿ ಸಿಗಬೇಕು, ಸಿಕ್ಕರೆ ಯಶ್ನಂತ ಗಂಡ ಸಿಗಬೇಕು ಅಂತೆಲ್ಲಾ ಸಾವಿರಾರು ಕಮೆಂಟ್ಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದು. ಅಷ್ಟರ ಮಟ್ಟಿಗೆ ಈ ಜೋಡಿ ಜನಪ್ರಿಯತೆ ಪಡೆದುಕೊಂಡಿದ್ದಾರೆ.
.ಟಾಕ್ಸಿಕ್ನಲ್ಲಿ ಯಶ್ ‘ರಾಯ’: ರಾಧಿಕಾ ಪಂಡಿತ್ ಹೆಸರಿನೊಂದಿಗೆ ಇದ್ಯಾ ನಂಟು?.Photo | ಮಕ್ಕಳ ನಿಷ್ಕಲ್ಮಶ ಪ್ರೀತಿ ನಮ್ಮೆಲ್ಲರಿಗೂ ಸ್ಫೂರ್ತಿ : ರಾಧಿಕಾ ಪಂಡಿತ್.
ಇದೀಗ ಪತಿ ಯಶ್ಗೆ ನಟಿ ರಾಧಿಕಾ ಪಂಡಿತ್ ಅವರು ಮುದ್ದಾಗಿ ವ್ಯಾಲೆಂಟೈನ್ಸ್ ಡೇ ಶುಭಾಶಯ ತಿಳಿಸಿದ್ದಾರೆ. ಅದರ ಜೊತೆಗೆ ಕಡಲ ತೀರದಲ್ಲಿ ಇಬ್ಬರೂ ಕುಳಿತು, ಆಕಾಶದೆತ್ತರಕ್ಕೆ ಹಾರಿದ ಪಟಾಕಿಯನ್ನು ನೋಡಿ ಎಂಜಾಯ್ ಮಾಡುತ್ತಿರುವ ಫೋಟೊ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ಆ ಫೋಟೊ ಜೊತೆಗೆ ರಾಧಿಕಾ ಪಂಡಿತ್ ಅವರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ರಾಧಿಕಾ ಪಂಡಿತ್ ಪೋಸ್ಟ್ನಲ್ಲಿ ಏನಿದೆ?

‘ಯಾರೂ ನೋಡಿರದ ಹಾಗೇ ನಾನು ನೃತ್ಯ ಮಾಡಲು ಸಾಧ್ಯವಾಗುವಂತೆ ಮಾಡಿದ ಆ ವ್ಯಕ್ತಿಗೆ.. ನಿನ್ನ ಕಣ್ಣುಗಳಲ್ಲಿ ಕಾಣಿಸುವ ಆಯಾಸ ನನಗೆ ಕಾಣುತ್ತದೆ. ಇನ್ನಾರಿಗೂ ಗೊತ್ತಾಗದ ನಿಮ್ಮ ತ್ಯಾಗಗಳು ನನಗೆ ಗೊತ್ತಾಗುತ್ತವೆ. ದೂರು ನೀಡದೆ ನೀವು ಹೊತ್ತುಕೊಂಡು ನಡೆಯುವ ಆ ದೀರ್ಘ ದಿನಗಳ ಭಾರವನ್ನು ನಾನು ಕಂಡಿದ್ದೇನೆ. ಇದೆಲ್ಲಾ ನಮಗಾಗಿ ಎನ್ನುವುದು ನನಗೆ ಗೊತ್ತು. ಪ್ರತಿ ದಿನವೂ ನನ್ನನ್ನೇ ಆಯ್ಕೆ ಮಾಡಿಕೊಳ್ಳುವುದಕ್ಕಾಗಿ ಧನ್ಯವಾದಗಳು. ಪ್ರೇಮಿಗಳ ದಿನದ ಶುಭಾಶಯಗಳು, ನನ್ನ ಜೊತೆ ಎಂದೆಂದಿಗೂ ಇರುವವನೇ’ ಎಂದು ಬರೆದಿಕೊಂಡಿದ್ದಾರೆ.

ಪರಸ್ಪರ ಪ್ರೀತಿಸುತ್ತಿದ್ದ ಯಶ್ ಹಾಗೂ ರಾಧಿಕಾ 2016ರ ಡಿಸೆಂಬರ್ 9ರಂದು ಮದುವೆಯಾಗಿದ್ದರು. ಈ ಜೋಡಿಗೆ ಐರಾ ಹಾಗೂ ಯಥರ್ವ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.