ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಸಂಕಷ್ಟ ಕೊನೆಯಾಗಿ, ಒಳ್ಳೆಯ ದಿನಗಳು ಬರಲಿವೆ: ರಾಧಿಕಾ ಪಂಡಿತ್

ಅಕ್ಷರ ಗಾತ್ರ

ಬೆಂಗಳೂರು: ಈ ಕಷ್ಟದ ದಿನಗಳು ಕೊನೆಯಾಗಿ, ಶೀಘ್ರವೇ ಉತ್ತಮ ದಿನಗಳು ನಮಗೆ ದೊರೆಯಲಿದೆ ಎಂದು ಕೆಜಿಎಫ್ ಖ್ಯಾತಿಯ ನಟ ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೇಳಿದ್ದಾರೆ.

ನಾವೆಲ್ಲರೂ ಹಲವು ರೀತಿಯ ಸಾವು-ನೋವುಗಳನ್ನು ಕಂಡಿದ್ದೇವೆ. ನಮ್ಮ ಆಪ್ತರನ್ನು ಕಳೆದುಕೊಂಡಿದ್ದೇವೆ, ಸಂಕಷ್ಟದ ದಿನಗಳನ್ನು ನೋಡುತ್ತಿದ್ದೇವೆ. ನಮಗೆ ಭಯವಾಗಿದೆ. ಮಾನಸಿಕವಾಗಿಯೂ ಕುಗ್ಗಿಹೋಗಿದ್ದೇವೆ, ಆದರೆ ಈ ದಿನಗಳು ಕಳೆದು ಹೋಗಲಿವೆ, ಮುಂದೆ ಒಳ್ಳೆಯ ದಿನಗಳು ಖಂಡಿತಾ ಬರಲಿದೆ, ಎಲ್ಲರಿಗೂ ಒಳ್ಳೆಯದಾಗಲಿದೆ ಎಂದು ರಾಧಿಕಾ ಪಂಡಿತ್ ಹೇಳಿದ್ದಾರೆ.

ಇಬ್ಬರು ಮಕ್ಕಳ ಜತೆಗೆ ಸಮುದ್ರ ದಡದಲ್ಲಿ ಕುಳಿತುಕೊಂಡಿರುವ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ರಾಧಿಕಾ ಪಂಡಿತ್, ಎಲ್ಲ ರೀತಿಯ ಸಮಸ್ಯೆಗಳಿಗೆ ನಾವು ಸಾಕ್ಷಿಯಾಗಿದ್ದೇವೆ, ಆದರೆ ಭರವಸೆ ಇರಲಿ. ನಾವೆಲ್ಲರೂ ಒಟ್ಟಾಗಿ ನಿಲ್ಲೋಣ, ಈ ಸಮಸ್ಯೆಯನ್ನು ಎದುರಿಸೋಣ‌, ಖಂಡಿತಾ ಒಳ್ಳೆಯ ದಿನಗಳು ನಮ್ಮದಾಗಲಿದೆ ಎಂದು ರಾಧಿಕಾ ತಿಳಿಸಿದ್ದಾರೆ.

ಜತೆಗೆ ಅಭಿಮಾನಿಗಳು ಮತ್ತು ಹಿತೈಷಿಗಳನ್ನು ಉದ್ದೇಶಿಸಿ, ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಆದರೆ ನಿಮ್ಮಲ್ಲಿ ಧನಾತ್ಮಕ ಚಿಂತನೆ ಮೂಡಿಸಲು ಮತ್ತು ಮುಖದಲ್ಲಿ ನಗು ಕಾಣಿಸುವಂತೆ ಮಾಡಲು ನಾನು ಸದಾ ಇರುತ್ತೇನೆ. ಪ್ರೀತಿ ಇರಲಿ ಎಂದು ಹಾರೈಸಿದ್ದಾರೆ.

ರಾಧಿಕಾ ಪತಿ ಯಶ್, ಇತ್ತೀಚೆಗೆ ಚಿತ್ರರಂಗದ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ವರ್ಗದ 3000 ಮಂದಿಗೆ ತಲಾ ₹5000 ಧನಸಹಾಯ ಮಾಡುವುದಾಗಿ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT