ಇಷ್ಟು ದಿನ ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮಿಂಚುತ್ತಿದ್ದ ರಾಜ್ ಬಿ. ಶೆಟ್ಟಿ ಈಗ ಖಳನಾಯಕನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಕೇವಲ ಚಂದನವನದಲ್ಲಷ್ಟೇ ಅಲ್ಲದೆ ಪರ ಭಾಷೆಯಲ್ಲೂ ಮೋಡಿ ಮಾಡಲು ಸಿದ್ಧರಾಗಿರುವ ಸುದ್ದಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ರಾಜ್ ಬಿ. ಶೆಟ್ಟಿ ಅವರು ತಮಿಳು ಚಿತ್ರರಂಗಕ್ಕೆ ಖಳನಾಯಕನಾಗಿ ಪದಾರ್ಪಣೆ ಮಾಡಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ರಾಜ್ ಬಿ. ಶೆಟ್ಟಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ‘ಗರುಡ ಗಮನ ವೃಷಭ ವಾಹನ’, ‘ಟೋಬಿ’, ‘ಒಂದು ಮೊಟ್ಟೆಯ ಕಥೆ’, ‘ಸು ಫ್ರಮ್ ಸೋ’, ‘45’, ‘ರಕ್ಕಸಪುರದೋಳ್’ ಅಂತಹ ಸಿನಿಮಾಗಳನ್ನು ನೀಡಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ರಾಜ್ ಬಿ. ಶೆಟ್ಟಿ ಈಗ ತಮಿಳು ಚಿತ್ರರಂಗಕ್ಕೆ ಖಳನಾಯಕನಾಗಿ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
.ರಕ್ಕಸಪುರದೋಳ್ ಪ್ರೀಮಿಯರ್ ಶೋಗೆ ಜನರ ಮೆಚ್ಚುಗೆ: ರಾಜ್ ಬಿ ಶೆಟ್ಟಿ ಹೇಳಿದ್ದೇನು?.ರಾಜ್. ಬಿ. ಶೆಟ್ಟಿ: ನಟನೆಗೂ ಸೈ, ವಾಲಿಬಾಲ್ ಆಟಕ್ಕೂ ಸೈ .
ತಮಿಳಿನ ಖ್ಯಾತ ನಿರ್ಮಾಪಕ ತ್ಯಾಗರಾಜನ್ ಕುಮಾರರಾಜ ಅವರ ನಿರ್ದೇಶನದಲ್ಲಿ ‘ಪಾಕೆಟ್ ನಾವೆಲ್’ ಎಂಬ ಸಿನಿಮಾ ಮೂಡಿಬರುತ್ತಿದ್ದು, ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗುತ್ತಿದೆ. ನಟ ವಿಜಯ್ ಸೇತುಪತಿ ಅವರು ಈ ಸಿನಿಮಾದ ನಾಯಕನಾಗಿದ್ದು, ಇವರಿಗೆ ಜೊತೆಯಾಗಿ ಮಾಳವಿಕಾ ಮೋಹನನ್ ಅವರು ಜೋಡಿಯಾಗಿದ್ದಾರೆ. ಇದೇ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಖಳನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಆರಂಭಗೊಂಡಿದೆ ಎಂದು ಮಾಹಿತಿ ನೀಡಲಾಗಿದೆ.

ತ್ಯಾಗರಾಜನ್ ಕುಮಾರರಾಜ ಅವರು ತಮಿಳಿನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಅವರು, ಆರಣ್ಯ ಕಾಂಡಂ (2010) ಮತ್ತು ಸೂಪರ್ ಡಿಲಕ್ಸ್ (2019) ಚಿತ್ರಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈಗ, ಅವರು ವಿಜಯ್ ಸೇತುಪತಿ ಅವರೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ. ಜೊತೆಗೆ ರಾಜ್ ಬಿ. ಶೆಟ್ಟಿ ಅವರು ಸಿನಿಮಾಗೆ ಖಳನಾಯಕನಾಗಿ ಎಂಟ್ರಿ ಕೊಟ್ಟಿದ್ದು ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.