ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್‌ ಕುಂದ್ರಾ ಮುಖ ಮುಚ್ಚಿಕೊಂಡ ವಿಡಿಯೊ ವೈರಲ್‌

film
Last Updated 14 ಅಕ್ಟೋಬರ್ 2022, 10:34 IST
ಅಕ್ಷರ ಗಾತ್ರ

ಉದ್ಯಮಿ, ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ‘ಕರ್ವಾ ಚೌತ್‌’ ಕಾರ್ಯಕ್ರಮಕ್ಕೆ ಮುಖ ಮುಚ್ಚಿಕೊಂಡು ಆಗಮಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಅಶ್ಲೀಲ ಚಿತ್ರ ನಿರ್ಮಾಣ ಆರೋಪ ಎದುರಿಸುತ್ತಿರುವ ರಾಜ್‌ ಕುಂದ್ರಾ, ಮುಖ ಮುಚ್ಚಿಕೊಂಡು ಬಂದಿರುವುದನ್ನು ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ. ‘ಇಂದು ನಿಮಗೆ ಮಾಸ್ಕ್‌ ಸಿಗಲಿಲ್ಲವೆ?’, ‘ನೀವ್ಯಾಕೆ ಶಿಲ್ಪಾ ಶೆಟ್ಟಿ ಮಾಡಬೇಕಿದ್ದ ಆಚರಣೆಗಳನ್ನು ಮಾಡುತ್ತಿದ್ದೀರಿ?’ಎಂಬಿತ್ಯಾದಿಯಾಗಿ ಪ್ರತಿಕ್ರಿಯಿಸಿದ್ದಾರೆ. ಬಹುತೇಕರು ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಲಿಂಕ್‌ ಮಾಡಿ ದ್ವಂದಾರ್ಥದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇನ್ನೊಂದೆಡೆ ಶಿಲ್ಪಾ ಶೆಟ್ಟಿ ‘ಕರ್ವಾ ಚೌತ್‌’ ಸಂಭ್ರಮದ ಚಿತ್ರವನ್ನು ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪತಿ ರಾಜ್‌ ಕುಂದ್ರಾ ಜೊತೆಗಿನ ಚಿತ್ರ ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ, ಜೀವನದಲ್ಲಿ ಮೊದಲ ಸಲ ಕುಂದ್ರಾ ತನಗಾಗಿ ಉಪವಾಸ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಅನಿಲ್‌ ಕಪೂರ್‌ ಈ ಚಿತ್ರವನ್ನು ಕ್ಲಿಕ್ಕಿಸಿದ್ದಾರೆಂದು ಕ್ರೆಡಿಟ್‌ ನೀಡಿದ್ದಾರೆ.

ರವಿನಾ ಟಂಡನ್‌, ನೀಲಂ ಕೊಠಾರಿ ಮೊದಲಾದ ನಟಿಯರ ಜೊತೆ ಹಬ್ಬ ಆಚರಿಸಿದ ವಿಡಿಯೊವನ್ನು ಶಿಲ್ಪಾ ಹಂಚಿಕೊಂಡಿದ್ದಾರೆ. 2009ರಲ್ಲಿ ಶಿಲ್ಪಾ ಶೆಟ್ಟಿ ಉದ್ಯಮಿ ರಾಜ್‌ ಕುಂದ್ರಾ ಅವರನ್ನು ವಿವಾಹವಾಗಿದ್ದರು. ಗಂಡನ ಶ್ರೇಯಸ್ಸಿಗಾಗಿ ಹೆಣ್ಣುಮಕ್ಕಳು ಉಪವಾಸದೊಂದಿಗೆ ಕರ್ವಾ ಚೌತ್‌ ಆಚರಿಸುವ ಪದ್ದತಿ ಉತ್ತರ ಭಾರತದಲ್ಲಿ ಜನಪ್ರಿಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT