ತೆಲುಗು ಥ್ರಿಲ್ಲರ್ ಸಿನಿಮಾ ‘ಹಿಟ್’ನ ಹಿಂದಿ ರಿಮೇಕ್ನಲ್ಲಿ ರಾಜ್ಕುಮಾರ್ ರಾವ್ ಅವರು ಅಭಿನಯಿಸಲಿದ್ದಾರೆ. ಕಾಣೆಯಾದ ಮಹಿಳೆಯೊಬ್ಬಳನ್ನು ಹುಡುಕಲು ಪೊಲೀಸ್ ಅಧಿಕಾರಿಯೊಬ್ಬ ಮುಂದಾಗುವ ಕಥೆ ಈ ಚಿತ್ರದಲ್ಲಿ ಇದೆ.

ತೆಲುಗಿನ ಈ ಚಿತ್ರದಲ್ಲಿ ವಿಶ್ವಾಕ್ ಸೇನ್ ಮತ್ತು ರುಹಾನಿ ಶರ್ಮ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದರು. ರಾಜ್ಕುಮಾರ್ ಅವರು ಹಿಂದಿ ರಿಮೇಕ್ನಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

‘ನಾನು ಹಿಟ್ ಸಿನಿಮಾ ನೋಡಿದ ತಕ್ಷಣವೇ ಅದರ ಜೊತೆ ನನ್ನನ್ನು ಗುರುತಿಸಿಕೊಂಡೆ. ವೀಕ್ಷಕರನ್ನು ತನ್ನತ್ತ ಸೆಳೆದು, ಹಿಡಿದಿಟ್ಟುಕೊಳ್ಳುವ ಕಥೆ ಇದರಲ್ಲಿ ಇದೆ. ಇಂದಿನ ಸ್ಥಿತಿಯಲ್ಲೂ ಕಥೆ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿಲ್ಲ. ನಾನು ಹಿಂದೆ ಮಾಡಿರದ ಪಾತ್ರಗಳಿಗಾಗಿ ಯಾವತ್ತೂ ಹುಡುಕಾಟ ನಡೆಸುತ್ತಿರುತ್ತೇನೆ. ಹಿಟ್ ಸಿನಿಮಾದಲ್ಲಿ ನನಗೆ ನಾನು ಹಿಂದೆ ಮಾಡಿರದ ಪಾತ್ರ ಇದೆ’ ಎಂದು ರಾಜ್ಕುಮಾರ್ ಅವರು ಹೇಳಿದ್ದಾರೆ.

ಶೈಲೇಶ್ ಕೊಲನು ಅವರು ಈ ಚಿತ್ರವನ್ನು ತೆಲುಗಿನಲ್ಲಿ ನಿರ್ದೇಶಿಸಿದ್ದರು. ಹಿಂದಿ ಅವತರಣಿಕೆಯ ಚಿತ್ರಕ್ಕೆ ರಾಜ್ಕುಮಾರ್ ಅವರು ಸೂಕ್ತವಾದ ವ್ಯಕ್ತಿ ಎಂಬುದು ಶೈಲೇಶ್ ಅವರ ಅಭಿಪ್ರಾಯ. ‘ತನ್ನ ಇತಿಹಾಸ ಹಾಗೂ ವರ್ತಮಾನದ ಜೊತೆ ನಿರಂತರ ಸಂಘರ್ಷನಡೆಸುತ್ತಿರುವ ಪೊಲೀಸ್ ಅಧಿಕಾರಿಯ ಕಥೆ ಹಿಟ್ ಸಿನಿಮಾದಲ್ಲಿ ಇದೆ. ನಾಯಕನ ಪಾತ್ರವನ್ನು ರಾಜ್ ನಿಭಾಯಿಸಬಲ್ಲರು ಎಂದು ನನಗೆ ಅನ್ನಿಸಿತು’ ಎಂದು ಶೈಲೇಶ್ ಹೇಳಿದ್ದಾರೆ.

ರಾಜ್ಕುಮಾರ್ ರಾವ್ ಅವರು 2011ರಲ್ಲಿ ‘ಶೈತಾನ್’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು. ಆಗಿನಿಂದಲೂ ಶೈಲೇಶ್ ಅವರು ರಾಜ್ಕುಮಾರ್ ಅವರ ಅಭಿನಯವನ್ನು ಗಮನಿಸುತ್ತಿದ್ದರಂತೆ. ‘ರಾಜ್ಕುಮಾರ್ ಅವರು ತಮ್ಮ ಅಭಿನಯದಿಂದ ಪ್ರತಿಬಾರಿಯೂ ನಮ್ಮಲ್ಲಿ ಆಶ್ಚರ್ಯ ಮೂಡಿಸಿದ್ದಾರೆ. ರಾಜ್ಕುಮಾರ್ ಜೊತೆ ಕೆಲಸ ಮಾಡಲು ನಾನು ಉತ್ಸುಕ ಆಗಿದ್ದೇನೆ’ ಎಂದು ಶೈಲೇಶ್ ಹೇಳಿದ್ದಾರೆ.

ಹಿಟ್ ಚಿತ್ರವು ಈಗ ಪ್ರೀಪ್ರೊಡಕ್ಷನ್ ಹಂತದಲ್ಲಿ ಇದ್ದು, 2021ರ ವೇಳೆಗೆ ತೆರೆಗೆ ಬರುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.