ದಕ್ಷಿಣ ಭಾರತದ ಖ್ಯಾತಿ ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ಸಂಭಾವನೆಯಲ್ಲಿ ಶೇ 50ರಷ್ಟು ವಿನಾಯಿತಿ ನೀಡಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಚಂದ್ರಶೇಖರ ಯಲೆಟ್ಟಿ ನಿರ್ದೇಶನದ ತಮ್ಮ ಮುಂದಿನ ಚಿತ್ರಕ್ಕೆ ರಕುಲ್ ಸಂಭಾವನೆಯಲ್ಲಿ ವಿನಾಯಿತಿ ನೀಡಿದ್ದಾರಂತೆ. ಈ ಚಿತ್ರದಲ್ಲಿ ನಿತಿನ್ ನಾಯಕನಾಗಿ ನಟಿಸುತ್ತಿದ್ದಾರೆ.

ಮೂಲಗಳ ಪ್ರಕಾರ ಲಾಕ್ಡೌನ್ಗೂ ಮೊದಲು ರಕುಲ್ ಸಿನಿಮಾವೊಂದಕ್ಕೆ ₹ 1.5 ಕೋಟಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಸಿನಿ ಉದ್ಯಮದ ಸದ್ಯದ ಪರಿಸ್ಥಿತಿಯನ್ನು ಪರಿಗಣಿಸಿ ತಮ್ಮ ನಿರ್ಮಾಪಕರ ಪರವಾಗಿ ನಿಂತ ಮೊದಲ ಸ್ಟಾರ್ ನಟಿ ರಕುಲ್.

ಇಲ್ಲಿಯವರೆಗೆ ಸಿನಿಮಾರಂಗದಿಂದ ಯಾವುದೇ ನಟ–ನಟಿಯರು ಸಂಭಾವನೆಯಲ್ಲಿ ವಿನಾಯಿತಿ ಮಾಡುವುದಾಗಿ ಬಹಿರಂಗವಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ. ಆ ಕಾರಣಕ್ಕೆ ರಕುಲ್ ಉಳಿದ ನಟ–ನಟಿಯರಿಗೆ ಮಾದರಿಯಾಗಿದ್ದಾರೆ.

ಕೊರೊನಾ ಸೋಂಕು ಎಲ್ಲ ಉದ್ಯಮವನ್ನು ಬುಡಮೇಲು ಮಾಡಿದೆ. ಅದಕ್ಕೆ ಸಿನಿಮಾ ಕ್ಷೇತ್ರವೂ ಹೊರತಾಗಿಲ್ಲ. ಆ ಕಾರಣಕ್ಕೆ ದೊಡ್ಡದು ಸಣ್ಣದು ಎಂದು ಲೆಕ್ಕಿಸದೆ ಎಲ್ಲದರಲ್ಲೂ ರಾಜಿ ಹಾಗೂ ಹೊಂದಾಣಿಕೆ ಮಾಡಿಕೊಳ್ಳಲು ಹೇಳಲಾಗುತ್ತಿದೆ ಎನ್ನಲಾಗುತ್ತಿದೆ.

ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಅನೇಕ ಸಿನಿತಂಡಗಳು ಸಂಬಳವಿಲ್ಲದೇ ನಿರುದ್ಯೋಗಿಗಳಾಗಿವೆ. ಇದಕ್ಕೆ ದೊಡ್ಡ ಬಜೆಟ್ ಸಿನಿಮಾಗಳು ಹೊರತಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.