ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್ ನಟ, ನಿರ್ಮಾಪಕ ಜಾಕಿ ಭಗ್ನಾನಿ ಜತೆ ಹಸೆಮಣೆ ಏರಿದ ರಾಕುಲ್ ಪ್ರೀತ್ ಸಿಂಗ್

Published 21 ಫೆಬ್ರುವರಿ 2024, 16:12 IST
Last Updated 21 ಫೆಬ್ರುವರಿ 2024, 16:12 IST
ಅಕ್ಷರ ಗಾತ್ರ

ನವದೆಹಲಿ: ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಇಂದು (ಬುಧವಾರ) ಬಾಲಿವುಡ್ ನಟ, ನಿರ್ಮಾಪಕ ಜಾಕಿ ಭಗ್ನಾನಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಗೋವಾದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಎರಡು ಕುಟುಂಬಗಳ ಆಪ್ತರು ಮತ್ತು ಸ್ನೇಹಿತರು ಭಾಗವಹಿಸಿದ್ದರು.

ಮದುವೆಯ ಫೋಟೊಗಳನ್ನು ಜಾಕಿ ಭಗ್ನಾನಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳನ್ನು ವೀಕ್ಷಿಸಿರುವ ಅಭಿಮಾನಿಗಳು ನೆಚ್ಚಿನ ಜೋಡಿಗೆ ಶುಭ ಹಾರೈಸಿದ್ದಾರೆ.

ರಾಕುಲ್ ಪ್ರೀತ್ ಸಿಂಗ್ ಹಾಗೂ ಭಗ್ನಾನಿ ಹಲವು ದಿನಗಳಿಂದ ಡೇಟಿಂಗ್‌ ಮಾಡುತ್ತಿದ್ದರು.

ಕೋಲ್ಕತ್ತ ಮೂಲದ 38 ವರ್ಷದ ಜಾಕಿ ಭಗ್ನಾನಿ ಬಾಲಿವುಡ್‌ ನಟ ಹಾಗೂ ನಿರ್ಮಾಪಕ. 2001ರಲ್ಲಿ ‘ರೆಹನಾ ಹೈ ತೆರೆ ದಿಲ್ ಮೇನ್’ ಸಿನಿಮಾ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು. ‘ಫಾಲ್ತು’, ‘ಅಜಬ್ ಗಜಬ್’, ‘ಮೋಹಿನಿ’, ‘ವೆಲ್‌ ಕಮ್ ಟು ಕರಾಚಿ’, ‘ರಂಗ್ರೇಜ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು, ‘ಕೂಲಿ ನಂ 1’, ‘ವೆಲ್‌ ಕಮ್ ಟು ನ್ಯೂಯಾರ್ಕ್’, ‘ಬೆಲ್ ಬಾಟಮ್’ ಸೇರಿ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ.

ಅತ್ತ ರಾಕುಲ್ ಕೂಡ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ಸಿನಿಮಾಗಳು ಪೂರ್ಣಗೊಳ್ಳುವ ಹಂತದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT