ಟಾಲಿವುಡ್ ಜನಪ್ರಿಯ ನಟ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ದಂಪತಿ ಸಂಭ್ರಮದಲ್ಲಿದ್ದಾರೆ. (ಜ.31)ರಂದು ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಅವರು ಅವಳಿ ಮಕ್ಕಳಿಗೆ (ಹೆಣ್ಣು ಹಾಗೂ ಗಂಡು) ಜನ್ಮ ನೀಡಿದ್ದರು. ಪತ್ನಿಯ ಹೆರಿಗೆಗಾಗಿ ಆಸ್ಪತ್ರೆಗೆ ಹೋಗುವ ಮೊದಲು ಏನೆಲ್ಲಾ ಆಯಿತು ಎಂಬುವುದರ ವಿಡಿಯೊ ತುಣುಕನ್ನು ಉಪಾಸನಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

2023ರಲ್ಲಿ ದಂಪತಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು. ವಿಶೇಷ ಏನೆಂದರೆ, ರಾಮ್ಚರಣ್ ದಂಪತಿಯ ಮೊದಲ ಮಗಳು ಕ್ಲಿನ್ ಕಾರಾ ಜನಿಸಿದ ಅಪೊಲೊ ಆಸ್ಪತ್ರೆಯ ಹೆರಿಗೆ ಕೊಠಡಿಯಲ್ಲೇ ಈ ಬಾರಿ ಉಪಾಸನಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
.ಅವಳಿ ಮಕ್ಕಳ ಸಂಭ್ರಮದಲ್ಲಿರುವ ರಾಮ್ ಚರಣ್ ದಂಪತಿಗೆ ಶುಭ ಕೋರಿದ ಅಲ್ಲು ಅರ್ಜುನ್.ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ‘ಚಿಕ್ರಿ ಚಿಕ್ರಿ’ ಹಾಡು ಬಿಡುಗಡೆ.
ಹೆರಿಗೆ ಬಳಿಕ ತಮಗೆ ಶುಭಕೋರಿದ ಎಲ್ಲರಿಗೂ ಉಪಾಸನ ಧನ್ಯವಾದ ತಿಳಿಸಿದ್ದಾರೆ. ‘ನಾನು ಇದನ್ನು ನೋಡುವ ಪ್ರತಿ ಬಾರಿಯೂ ನನ್ನ ಹೃದಯ ತುಂಬಿ ಬರುತ್ತದೆ. ನಮ್ಮ ಸುತ್ತಲಿನ ಪ್ರೀತಿ, ಶಕ್ತಿ ಮತ್ತು ಸಕಾರಾತ್ಮಕತೆಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ತೇಜಸ್ವಿ ಅವರು ಮತ್ತು ಇಡೀ ಆಸ್ಪತ್ರೆಯ ಸಿಬ್ಬಂದಿ ತಂಡವರ ಕಾಳಜಿ ಮತ್ತು ಬದ್ಧತೆಯು ನಮಗೆ ಎಲ್ಲವನ್ನೂ ಅರ್ಥೈಸಿತು. ರಾಮ್ ಚರಣ್ ಅವರ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಧನ್ಯವಾದಗಳು. ನೀವು ಯಾವಾಗಲೂ ನಮ್ಮ ಮಕ್ಕಳನ್ನು ರಕ್ಷಿಸುತ್ತೀರಿ ಮತ್ತು ಅವರ ಸುರಕ್ಷತೆಯನ್ನು ಗೌರವಿಸುತ್ತೀರಿ ಎಂದು ನಾನು ನಂಬುತ್ತೇನೆ. ನಮಗಾಗಿ ಪ್ರಾರ್ಥಿಸಿದ ಪ್ರಪಂಚದಾದ್ಯಂತ ಇರುವ ಎಲ್ಲ ಅಭಿಮಾನಿಗಳಿಗೂ ಕೃತಜ್ಞತೆಗಳು’ ಎಂದು ಉಪಾಸನಾ ಪೋಸ್ಟ್ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.