ಟಾಲಿವುಡ್ ಜನಪ್ರಿಯ ನಟ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಅವರು (ಜ.31)ರಂದು ಅವಳಿ ಮಕ್ಕಳಿಗೆ (ಹೆಣ್ಣು ಹಾಗೂ ಗಂಡು) ಜನ್ಮ ನೀಡಿದ್ದಾರೆ. ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕೊನಿಡೇಲಾ ಅವರಿಗೆ ನಟ ಅಲ್ಲು ಶುಭಾಶಯ ಕೋರಿದ್ದಾರೆ.

ನಟ ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಶುಭಾಶಯದ ಪೋಸ್ಟರ್ ಹಂಚಿಕೊಂಡಿದ್ದಾರೆ. ‘ಮತ್ತೊಮ್ಮೆ ಅದ್ಭುತ ಪೋಷಕರಾಗಿದ್ದಕ್ಕಾಗಿ ರಾಮ್ ಚರಣ್ ಮತ್ತು ಉಪಾಸನಾ ಅವರಿಗೆ ಅಭಿನಂದನೆಗಳು. ಎಲ್ಲೆಡೆ ಅಪಾರ ಸಂತೋಷ ಮತ್ತು ಸಂಭ್ರಮವಿದೆ’ ಎಂದು ಬರೆದಿದ್ದಾರೆ.

‘ಮಗು ಜನನದಿಂದ ಚಿರಂಜೀವಿ ಮತ್ತು ಚಿತ್ತಿಕಾ ಅವರ ಮುಖದಲ್ಲಿ ಸಂತೋಷ ಹಾಗೂ ಹೆಮ್ಮೆ ಕಾಣುತ್ತದೆ. ಇಡೀ ಕುಟುಂಬದ ಸಂತೋಷವನ್ನು ನೋಡಿ ಮನಸ್ಸಿಗೆ ತುಂಬಾ ಖುಷಿಯಾಯಿತು’ ಎಂದು ಹೇಳಿದ್ದಾರೆ.
.ನಟ ರಾಮ್ ಚರಣ್, ಮಗಳು ಕ್ಲೀಂ ಕಾರ ಮೇಲೆ ಏಕಾಏಕಿ ಮುಗಿಬಿದ್ದ ಅಭಿಮಾನಿಗಳು: ವಿಡಿಯೊ.
ನಟ ಜೂನಿಯರ್ ಎನ್ಟಿಆರ್ ಎಕ್ಸ್ನಲ್ಲಿ ಶುಭಾಶಯ ಕೋರಿದ್ದಾರೆ. ‘ ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೆಲಾ ಅವರಿಗೆ ಅಭಿನಂದನೆಗಳು. ಅವರ ಕುಟುಂಬಕ್ಕೆ ಪ್ರೀತಿ, ಆರೋಗ್ಯ ಮತ್ತು ಸಂತೋಷವನ್ನು ಹಾರೈಸುತ್ತೇನೆ’ ಎಂದು ಬರೆದಿದ್ದಾರೆ.

ನಟ ವರುಣ್ ತೇಜ್ ‘ ಅವಳಿ ಮಕ್ಕಳ ಆಗಮನಕ್ಕೆ ಅಣ್ಣ ಮತ್ತು ಅತ್ತಿಗೆ ಅವರಿಗೆ ಅಭಿನಂದನೆಗಳು. ಪ್ರೀತಿ ಹಾಗೂ ಸಂತೋಷ ಇಮ್ಮಡಿಗೊಳ್ಳಲಿ’ ಎಂದು ಶುಭಾಶಯ ಕೋರಿದ್ದಾರೆ.

‘ಅವಳಿ ಮಕ್ಕಳನ್ನು ಪಡೆದಿದ್ದಕ್ಕೆ ಇಬ್ಬರಿಗೂ ಅಭಿನಂದನೆಗಳು, ಮೆಗಾಸ್ಟಾರ್ಗೆ ಇದು ನಿಜಕ್ಕೂ ಡಬಲ್ ಸೆಲೆಬ್ರೇಷನ್’ ಎಂದು ಅನಿಲ್ ರವಿಪುಡಿ ಶುಭಾಶಯ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.