‘ಬಾಹುಬಲಿ’ ಸರಣಿ ಸಿನಿಮಾಗಳಲ್ಲಿ ಅಮರೇಂದ್ರ ಬಾಹುಬಲಿ ಮತ್ತು ಮಹೇಂದ್ರ ಬಾಹುಬಲಿ ವಿರುದ್ಧ ಅಬ್ಬರಿಸಿದ್ದ ಬಲ್ಲಾಳದೇವನ ಪಾತ್ರ ಇಂದಿಗೂ ಸಿನಿಪ್ರಿಯರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಈ ಪಾತ್ರಕ್ಕೆ ಜೀವ ತುಂಬಿದ್ದು ನಟ ರಾನಾ ದಗ್ಗುಬಾಟಿ ಎಂಬುದು ಎಲ್ಲರಿಗೂ ಗೊತ್ತು. ಈ ಚಿತ್ರಗಳ ಗೆಲುವಿನ ಹಾದಿಯಲ್ಲಿಯೇ ಅವರು ಸಪ್ತಪದಿ ತುಳಿಯಲಿದ್ದಾರೆಯೇ ಎಂದು ಆ ವೇಳೆ ಅವರ ಅಭಿಮಾನಿಗಳು ಲೆಕ್ಕಾಚಾರದಲ್ಲಿ ಮುಳುಗಿದ್ದೂ ಉಂಟು. ಆದರೆ, ಅಪ್ಪಿತಪ್ಪಿಯೂ ರಾನಾ ಮದುವೆ ಬಗ್ಗೆ ತುಟಿ ಬಿಟ್ಟಿರಲಿಲ್ಲ. ಈಗ ತನ್ನ ಮನದರಸಿಯ ಹೆಸರು ಮತ್ತು ಫೋಟೊವನ್ನು ಅವರೇ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.

‘ಮಿಹಿಕಾ ಬಜಾಜ್ ನನ್ನ ಬಹುಕಾಲದ ಗೆಳತಿ. ಆಕೆಯೊಟ್ಟಿಗೆ ಹಸೆಮಣೆ ತುಳಿಯುತ್ತಿದ್ದೇನೆ. ನನ್ನ ಪ್ರೀತಿಯ ಕೋರಿಕೆಗೆ ಆಕೆಯೂ ಸಮ್ಮತಿ ನೀಡಿದ್ದಾಳೆ’ ಎಂದು ಟ್ವೀಟ್ ಮಾಡಿದ್ದಾರೆ.ಕಳೆದ ಒಂದು ದಶಕದಿಂದಲೂ ಇಬ್ಬರಿಗೂ ಪರಿಚಯವಿದೆಯಂತೆ. ಆದರೆ, ಎಲ್ಲಿಯೂ ಇಬ್ಬರು ಪ್ರೀತಿಯ ಗುಟ್ಟು ಬಿಟ್ಟುಕೊಟ್ಟಿಲ್ಲ.

ಯುನಿವರ್ಸಿಟಿ ಆಫ್ ಆರ್ಟ್ಸ್ ಲಂಡನ್ನ ಪದವೀಧರೆ ಮಿಹಿಕಾ. ಸದ್ಯಕ್ಕೆ ಹೈದರಾಬಾದ್ನಲ್ಲಿ ನೆಲೆಸಿರುವ ಆಕೆ ಒಳಾಂಗಣ ವಿನ್ಯಾಸಕಿಯೂ ಹೌದು. ಜೊತೆಗೆ, ಡಿವ್ಯೂ ಡ್ರಾಫ್ ಡಿಸೈನ್ ಸ್ಟುಡಿಯೊ ಹೆಸರಿನ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಒಡತಿ. ಅಂದಹಾಗೆ ಮಿಹಿಕಾ ಪ್ರಾಯೋಜಕತ್ವದ ಹಲವು ಕಾರ್ಯಕ್ರಮಗಳಿಗೆ ರಾನಾ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದಾರಂತೆ.

ಆಕೆಯ ತಂದೆಯ ಹೆಸರು ಸುರೇಶ್ ಬಜಾಜ್. ತಾಯಿ ಬಂಟಿ ಬಜಾಜ್ ಆಭರಣಗಳ ವಿನ್ಯಾಸಕಿ. ಕೃಸಲಾ ಹೆಸರಿನ ಬ್ರಾಂಡ್ ಒಡತಿಯಾಗಿದ್ದಾರೆ. ಕೊರೊನಾ ಲಾಕ್ಡೌನ್ ಅವಧಿಯು ಮುಗಿದ ಬಳಿಕ ಎರಡು ಕುಟುಂಬಗಳು ಈ ಇಬ್ಬರ ಮದುವೆ ಬಗ್ಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.

‘ಕೊನೆಗೂ, ಬಲ್ಲಾಳದೇವ ಸಪ್ತಪದಿ ತುಳಿಯಲು ಸಜ್ಜಾಗುತ್ತಿರುವುದು ಖುಷಿ ತಂದಿದೆ’ ಎಂದು ‘ಮೆಗಾಸ್ಟಾರ್’ ಚಿರಂಜೀವಿ ಈ ಇಬ್ಬರಿಗೂ ಶುಭ ಕೋರಿದ್ದಾರೆ.

ಪ್ರಸ್ತುತ ರಾನಾ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾಗುತ್ತಿರುವ ‘ಹಾಥಿ ಮೇರೆ ಸಾಥಿ’ ಚಿತ್ರಕ್ಕೆ ಅವರೇ ನಾಯಕ. ‘ಮಡೈ ತಿರಂತು’ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಇದು ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾಗುತ್ತಿದೆ. ಅವರ ಬಹುನಿರೀಕ್ಷಿತ ಚಿತ್ರ ‘ಹಿರಣ್ಯ ಕಶ್ಯಪ’. ರಾನಾ ಮತ್ತು ಸಾಯಿ ಪಲ್ಲವಿ ಕಾಂಬಿನೇಷನ್ನಡಿ ಮೂಡಿಬರುತ್ತಿರುವ ‘ವಿರಾಟ ಪರ್ವ’ ಚಿತ್ರವೂ ಕುತೂಹಲ ಹೆಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.