‘ಕಳೆದ ಫೆಬ್ರುವರಿಯಲ್ಲಿ ಬಿಡುಗಡೆಯಾದ ತೆಲುಗಿನ ಭೀಷ್ಮ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿತ್ತು. ಅಲ್ಲದೇ ಅಭಿಮಾನಿಗಳು ಹಾಗೂ ವಿಮರ್ಶಕರಿಂದ ಈ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ‘ಜಯಂ’ ಖ್ಯಾತಿಯ ನಿತಿನ್‌ಗೆ ಯಶಸ್ಸು ತಂದು ಕೊಟ್ಟ ಸಿನಿಮಾವೂ ಇದೇ ಆಗಿದೆ. ಈ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಿತಿನ್‌ಗೆ ಜೋಡಿಯಾಗಿದ್ದರು.

ವೆಂಕಿ ಕುಡುಮುಲ ನಿರ್ದೇಶನದ ‘ಭೀಷ್ಮ’ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ. ಬಾಲಿವುಡ್‌ನ ಸ್ಟಾರ್ ನಟ ರಣಬೀರ್ ಕಪೂರ್ ರಿಮೇಕ್‌ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯು ಈ ಹಿಂದೆ ವರದಿಯಾಗಿತ್ತು.

ಆದರೆ ಈ ನಡುವೆ ರಣಬೀರ್ ಸರಣಿ ಚಿತ್ರಗಳಿಗೆ ಸಹಿ ಹಾಕಿದ್ದು ಅವರು ಭೀಷ್ಮ ರಿಮೇಕ್‌ನಲ್ಲಿ ನಟಿಸುವುದು ಕಷ್ಟ ಎಂಬ ಅಭಿಪ್ರಾಯ ಬಾಲಿವುಡ್ ಅಂಗಳದಲ್ಲಿ ಮೂಡಿತ್ತು. ಆದರೆ ಈ ಅಭಿಪ್ರಾಯವನ್ನು ತಳ್ಳಿ ಹಾಕಿ ರಿಮೇಕ್ ಚಿತ್ರದ ಮೇಲೆ ರಣಬೀರ್ ಆಸಕ್ತಿ ತೋರಿದ್ದಾರೆ ಎಂಬ ವಿಷಯವನ್ನು ಮೂಲಗಳು ಖಚಿತಪಡಿಸಿವೆ. ಅನೇಕ ವಿಮರ್ಶಕರು ರಣಬೀರ್ ಅವರ ಈ ಆಯ್ಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರಣ್ ಜೋಹರ್ ಒಡೆತನದ ಧರ್ಮಾ ಪ್ರೊಡಕ್ಷನ್ ಈ ಚಿತ್ರದ ರಿಮೇಕ್ ಹಕ್ಕನ್ನು ಪಡೆದುಕೊಂಡಿದೆ. ಸದ್ಯದಲ್ಲೇ ಚಿತ್ರದ ಶೂಟಿಂಗ್ ಕೂಡ ಆರಂಭವಾಗಲಿದೆ.

ರಣಬೀರ್ ಅಭಿಯನದ ‘ಶಂಶೇರಾ’ ಹಾಗೂ ‘ಬ್ರಹ್ಮಾಸ್ತ್ರ’ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ‘ಶಂಶೇರಾ’ ಚಿತ್ರಕ್ಕೆ ಕರಣ್ ಮಲ್ಹೋತ್ರ ನಿರ್ದೇಶನವಿದ್ದು, ಆಯಾನ್ ಮುಖರ್ಜಿ ‘ಬ್ರಹ್ಮಾಸ್ತ್ರ’ ಚಿತ್ರದ ನಿರ್ದೇಶಕರಾಗಿದ್ದಾರೆ.

ಟಾಲಿವುಡ್‌ನಲ್ಲಿ ಯಶಸ್ಸು ಗಳಿಸಿದ್ದ ಈ ಚಿತ್ರ, ಬಾಲಿವುಡ್ ಜನರನ್ನು ರಂಜಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.