ಗುರುವಾರ , ಅಕ್ಟೋಬರ್ 21, 2021
29 °C

ಜೋಧ್‌ಪುರದಲ್ಲಿ ಜತೆಯಾಗಿ ಕಾಣಿಸಿಕೊಂಡ ರಣ್‌ಬೀರ್-ಆಲಿಯಾ: ಮದುವೆಗೆ ಸಿದ್ಧತೆ?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Alia Bhatt Instagram Post

ಬೆಂಗಳೂರು: ಬಾಲಿವುಡ್‌ನ ಪ್ರೇಮ ಪಕ್ಷಿಗಳು ಎಂದೇ ಕರೆಯಿಸಿಕೊಳ್ಳುತ್ತಿರುವ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೋಡಿ ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ ಎಂದ ಸುದ್ದಿ ಹರಿದಾಡುತ್ತಿದೆ.

ಅದರ ಬೆನ್ನಲ್ಲೇ ರಣಬೀರ್-ಆಲಿಯಾ ಜತೆಯಾಗಿ ರಾಜಸ್ಥಾನದ ಜೋಧ್‌ಪುರ್‌ಗೆ ತೆರಳಿದ್ದಾರೆ.

ಜೋಧ್‌ಪುರದಲ್ಲಿ ಅರಮನೆಗಳಿದ್ದು, ಸಾಂಪ್ರದಾಯಿಕ ಶೈಲಿಯ ಮತ್ತು ಅದ‌್ಧೂರಿ ವಿವಾಹಕ್ಕೆ ಹೆಚ್ಚು ಪ್ರಶಸ್ತವಾದ ತಾಣಗಳಿವೆ. ಹೀಗಾಗಿ ಮದುವೆಗೆ ಸೂಕ್ತ ಸ್ಥಳ ನೋಡುವ ಸಲುವಾಗಿ ರಣಬೀರ್ ಮತ್ತು ಆಲಿಯಾ ಜೋಧ್‌ಪುರಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ರಣಬೀರ್ ಮತ್ತು ಆಲಿಯಾ ಜೋಧ್‌ಪುರಕ್ಕೆ ತೆರಳಿರುವ ಚಿತ್ರಗಳನ್ನು ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ವಾರಾಂತ್ಯದಲ್ಲಿ ಈ ಜೋಡಿ ಮದುವೆ ಸಿದ್ಧತೆಗೆ ತೊಡಗಿರುವುದನ್ನು ಗಮನಿಸಿದರೆ, ಶೀಘ್ರದಲ್ಲೇ ಮದುವೆ ದಿನಾಂಕವನ್ನು ಘೋಷಿಸುವುದು ಪಕ್ಕಾ ಎಂಬ ಲೆಕ್ಕಾಚಾರ ರಣಬೀರ್-ಆಲಿಯಾ ಅಭಿಮಾನಿಗಳದ್ದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು