ನಿರ್ದೇಶಕ ‘ಮಠ’ ಗುರುಪ್ರಸಾದ್ ಮತ್ತು ನಟ ಜಗ್ಗೇಶ್ 15 ವರ್ಷಗಳ ನಂತರ ಮತ್ತೆ ಒಂದಾಗಿ ಬಂದಿದ್ದಾರೆ. ಇವರಿಬ್ಬರ ಜೋಡಿಯ ‘ರಂಗನಾಯಕ’ ಚಿತ್ರ ಮಾರ್ಚ್ 8ರಂದು ತೆರೆ ಕಾಣುತ್ತಿದೆ. ಚಿತ್ರದ ‘ಎನ್ನ ಮನದರಸಿ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.

‘ಈ ಸಿನಿಮಾ ಸಂಪೂರ್ಣವಾಗಿ ಗುರುಪ್ರಸಾದ್ ಅವರ ಪ್ರಸಾದ. ಗುರುಪ್ರಸಾದ್ ಜಗಮೊಂಡ, ಯಾರು ಮಾತನ್ನೂ ಕೇಳೋದಿಲ್ಲ. ಮದವೇರಿದ ಒಂಟಿ ಸಲಗದಂತೆ. ಅವರು ವರ್ಷಕ್ಕೊಂದು ಸಿನಿಮಾ ಮಾಡಬೇಕು’ ಎಂದರು.

ಇದೇ ವೇಳೆ ಹುಲಿ ಉಗುರು ಪ್ರಕರಣದ ಕುರಿತು ಮಾತನಾಡಿ, ‘ನಾನು ಹುಲಿ ತರ ಬದುಕಬೇಕು ಎಂದು ನನ್ನ ತಾಯಿ ಹುಲಿ ಉಗುರನ್ನು ಕೊಟ್ಟರು. ಆದರೆ ಯಾವನೋ ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡು, ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ’ ಎಂದು ಜಗ್ಗೇಶ್ ಖಾರವಾಗಿ ಪ್ರತಿಕ್ರಿಯಿಸಿದರು.

‘ಪುಷ್ಪಕ ವಿಮಾನ’ ಖ್ಯಾತಿಯ ನಿರ್ಮಾಪಕ ವಿಖ್ಯಾತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜಗ್ಗೇಶ್ , ಚೈತ್ರ ಕೊಟ್ಟೂರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.