ಬೆಂಗಳೂರು: ‘ಪುಷ್ಪ‘ ಚಿತ್ರದ ಮೂಲಕ ಮಿಂಚುತ್ತಿರುವ ಕನ್ನಡದ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ, ಕಪ್ಪು ಬಣ್ಣದ ಸೀರೆಯುಟ್ಟು ಹೊಸ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾದಕ ನೋಟ ಹೊಂದಿರುವ ರಶ್ಮಿಕಾ ಅವರ ಈ ಫೋಟೊಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ಲೆಟ್ಸ್ ಬಿಗಿನ್‘ ಎಂಬ ಅಡಿಬರಹದಲ್ಲಿ ಪೋಸ್ಟ್ ಮಾಡಿದ್ದಾರೆ.
ಇಶಾನ್ ಗಿರಿ ಅವರ ಫೋಟೊಗ್ರಫಿಯಲ್ಲಿ ಮೂಡಿಬಂದಿರುವ ರಶ್ಮಿಕಾ ಚಿತ್ರಕ್ಕೆ ಇನ್‌ಸ್ಟಾಗ್ರಾಂನಲ್ಲಿ 23 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.
ರಶ್ಮಿಕಾ ಅವರು ಇನ್‌ಸ್ಟಾಗ್ರಾಂನಲ್ಲಿ 2.5 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದುವ ಮೂಲಕ ಸುದ್ದಿಯಾಗಿದ್ದರು.