ಬಹುಭಾಷಾ ನಟಿ, ನ್ಯಾಷನಲ್ ಕ್ರಶ್‌ರಶ್ಮಿಕಾ ಮಂದಣ್ಣ ಜನ್ಮದಿನಕ್ಕೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಜನ್ಮದಿನದಂದು ರಶ್ಮಿಕಾ ಅವರ ಮುಂದಿನ ಎರಡು ಚಿತ್ರಗಳ ಟೀಸರ್, ಪೋಸ್ಟರ್ ಬಿಡುಗಡೆಯಾಗಿದ್ದು, ಹನು ರಾಘವಪುಡಿ ನಿರ್ದೇಶನದ ಸಿನಿಮಾದಲ್ಲಿ ‘ಆಫ್ರೀನ್’ ಎಂಬ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ತಮಿಳಿನ ಖ್ಯಾತ ನಟ ದಳಪತಿ ವಿಜಯ್‌ಗೂ ಜೋಡಿಯಾಗಿ ರಶ್ಮಿಕಾ ನಟಿಸಲಿದ್ದಾರೆ.
2016ರಲ್ಲಿ ತೆರೆಕಂಡ ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ ಸಿನಿಪಯಣವನ್ನು ಆರಂಭಿಸಿದ್ದ ರಶ್ಮಿಕಾ, ನಂತರ ಟಾಲಿವುಡ್‌ನಲ್ಲಿ ಮಿಂಚಿದ್ದರು. ‘ಗೀತಾ ಗೋವಿಂದಂ’, ‘ದೇವದಾಸ್’, ‘ಸರಿಲೇರು ನೀಕ್ವೆವರು’, ‘ಡಿಯರ್ ಕಾಮ್ರೇಡ್’ ಹೀಗೆ ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡ ರಶ್ಮಿಕಾ, ಬಾಲಿವುಡ್‌ಗೂ ಜಿಗಿದಿದ್ದರು. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ‘ಗುಡ್‌ಬೈ’ನಲ್ಲಿ ಹಾಗೂ ನಟ ಸಿದ್ಧಾರ್ಥ ಮಲ್ಹೋತ್ರಾ ಅಭಿನಯದ ಮಿಷನ್ ಮಜ್ನು ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಅಭಿನಯಿಸಿದ್ದಾರೆ.
ರಾಘವಪುಡಿ ನಿರ್ದೇಶನದ ಸಿನಿಮಾದ ಮೋಷನ್ ಪೋಸ್ಟರ್ ಮಂಗಳವಾರ ಬಿಡುಗಡೆಯಾಗಿದ್ದು, ಜೀನ್ಸ್ ಹಾಗೂ ಹಿಜಾಬ್ ಧರಿಸಿಕೊಂಡು ಸುಡುತ್ತಿರುವ ಕಾರುಗಳ ಮಧ್ಯದಲ್ಲಿ ರಶ್ಮಿಕಾ ಅವರ ಆಫ್ರೀನ್ ಪಾತ್ರದ ಪ್ರವೇಶವನ್ನು ತೋರಿಸಲಾಗಿದೆ.
ಬಬ್ಲಿ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ರಶ್ಮಿಕಾ ಅವರು ಈ ಚಿತ್ರದಲ್ಲಿ ಭಿನ್ನ ಶೈಲಿಯ ಪಾತ್ರದಲ್ಲಿ ಕಾಣಿಸಿಕೊಂಡಂತಿದೆ. ಚಿತ್ರದಲ್ಲಿ ‘ಲೆಫ್ಟಿನೆಂಟ್ ರಾಮ್’ನ ಪಾತ್ರದಲ್ಲಿ ಮಲಯಾಳಂನ ಖ್ಯಾತ ನಟ ದುಲ್ಖರ್ ಸಲ್ಮಾನ್ ನಟಿಸುತ್ತಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
What can possibly be a better birthday gift? 🌸@directorvamshi @svc_official @actorvijay#thalapathy66 pic.twitter.com/FvNUkUcgOl
— Rashmika Mandanna (@iamRashmika) April 5, 2022
ತಮಿಳಿನ ಖ್ಯಾತ ನಟ ವಿಜಯ್ ಅವರ 66ನೇ ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ಬಣ್ಣಹಚ್ಚಲಿದ್ದಾರೆ. ರಶ್ಮಿಕಾ ಜನ್ಮದಿನದಂದೇ ಚಿತ್ರತಂಡವು ಅವರನ್ನು ತಂಡಕ್ಕೆ ಸ್ವಾಗತಿಸಿ ಟ್ವೀಟ್ ಮಾಡಿದೆ. ಈ ಸಿನಿಮಾವನ್ನು ‘ಮಹರ್ಷಿ’, ‘ಯೆವಡು’, ‘ಊಪಿರಿ’ ಮುಂತಾದ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ವಂಶಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.