ಶುಕ್ರವಾರ, ಆಗಸ್ಟ್ 12, 2022
28 °C
ಬಾಲಿವುಡ್‌ ನಟಿ ಶ್ರೀದೇವಿ ಬಯೋಪಿಕ್‌ನಲ್ಲಿ ನಟಿಸಲು ಇಷ್ಟವಂತೆ

‘ಐ ಆ್ಯಮ್‌ ಸಿಂಗಲ್’ ಎಂದ ನಟಿ ರಶ್ಮಿಕಾ ಮಂದಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಐ ಆ್ಯಮ್‌ ಸಿಂಗಲ್; ನನಗೆ ಹೀಗಿರುವುದೇ ಇಷ್ಟ’ 

–ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ನಟಿ ರಶ್ಮಿಕಾ ಮಂದಣ್ಣ ನೀಡಿರುವ ಉತ್ತರವಿದು. ನಟ ರಕ್ಷಿತ್‌ ಶೆಟ್ಟಿ ಜೊತೆಗಿನ ಆಕೆಯ ನಿಶ್ಚಿತಾರ್ಥ ಮುರಿದುಬಿದ್ದಿರುವುದು ಹಳೆಯ ಸುದ್ದಿ. ಆದರೆ, ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಯು ಸಂವಾದ ನಡೆಸುವಾಗ ಪ್ರೀತಿ ವೈಫಲ್ಯ, ಮದುವೆ, ಹೊಸ ಬಾಯ್‌ ಫ್ರೆಂಡ್‌ ಇತ್ಯಾದಿ ಬಗ್ಗೆ ಅಭಿಮಾನಿಗಳು ಪ್ರಶ್ನೆ ಕೇಳುವುದು ಸರ್ವೇ ಸಾಮಾನ್ಯ.

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ವೈಯಕ್ತಿಕ ಬದುಕಿನ ಬಗ್ಗೆ ರಶ್ಮಿಕಾ ನೀಡಿರುವ ಉತ್ತರ ಹೀಗಿದೆ; ‘ನನ್ನ ಹೆಸರನ್ನು ಹಲವು ನಟರೊಟ್ಟಿಗೆ ತಳುಕು ಹಾಕುತ್ತಿರುವುದು ನನಗೂ ಗೊತ್ತಿದೆ. ನಾನು ಈಗ ಒಬ್ಬಂಟಿಯಾಗಿಯೇ ಇದ್ದೇನೆ. ಇದನ್ನು ನೀವು ನಂಬಲೇ ಬೇಕು’ ಎಂದು ಹೇಳಿದ್ದಾರೆ. ಆಕೆಯ ಈ ಹೇಳಿಕೆಗೆ ಹಲವು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.

ರಶ್ಮಿಕಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತನ್ನ ಅಭಿಮಾನಿಗಳಿಗೆ ಆಗಾಗ್ಗೆ ಸಪ್ರೈಸ್‌ ನೀಡುತ್ತಲೇ ಇರುತ್ತಾರೆ. ಜೊತೆಗೆ, ಸಂವಾದ ಕೂಡ ನಡೆಸುತ್ತಾರೆ. ಈ ಬಾರಿ ಆಕೆ ತನ್ನ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ.

ರಶ್ಮಿಕಾಗೆ ಬಾಲಿವುಡ್‌ ನಟಿ ಶ್ರೀದೇವಿ ಅವರ ಬಯೋಪಿಕ್‌ನಲ್ಲಿ ನಟಿಸಲು ಇಷ್ಟವಿದೆಯಂತೆ. ಆಕೆಗೆ ಗುಲಾಬ್‌ ಜಾಮೂನ್‌ ಇಷ್ಟವಂತೆ. ‘ಆದರೆ, ಅದು ನನ್ನ ಆರೋಗ್ಯಕ್ಕೆ ಸರಿಹೊಂದುವುದಿಲ್ಲ. ಅದರಲ್ಲಿ ಸಕ್ಕರೆ ಅಂಶ ಹೆಚ್ಚಿರುವುದು ಕಾರಣ. ಆದರೂ, ಅದೇ ನನಗಿಷ್ಟ’ ಎಂದಿದ್ದಾರೆ.

ತೆಲುಗಿನಲ್ಲಿ ರಶ್ಮಿಕಾ ನಟಿಸಿದ ಕೊನೆಯ ಚಿತ್ರ ‘ಭೀಷ್ಮ’. ಇದಾದ ಬಳಿಕ ಸುಕುಮಾರ್‌ ನಿರ್ದೇಶನದ ‘ಪುಷ್ಪ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಆಕೆ ಧ್ರುವ ಸರ್ಜಾ ಜೊತೆಗೆ ನಟಿಸಿರುವ ‘ಪೊಗರು’ ಸಿನಿಮಾವೂ ಬಿಡುಗಡೆಗೆ ಸಿದ್ಧವಾಗಿದೆ.

 
 
 
 

 
 
 
 
 
 
 
 
 

Doing my bit to brighten up your feed for a second..🥱

A post shared by Rashmika Mandanna (@rashmika_mandanna) on

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು