ಮಂಗಳವಾರ, ಜನವರಿ 31, 2023
19 °C

ಮಾಲ್ಡೀವ್ಸ್‌ನಲ್ಲಿ ರಶ್ಮಿಕಾ, ದೇವರಕೊಂಡ ಜೊತೆಗಿದ್ದಾರಾ?

ಪ್ರಜಾವಾಣಿ ವೆಬ್‌‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಸದ್ಯ ಬಾಲಿವುಡ್‌ನಲ್ಲಿ ಸಕ್ರಿಯರಾಗಿರುವ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಮಾಲ್ಡೀವ್ಸ್‌ ಪ್ರವಾಸದಲ್ಲಿದ್ದಾರೆ. ಅಲ್ಲಿನ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅವರ ಜೊತೆ ವಿಜಯ್‌ ದೇವರಕೊಂಡ ಕೂಡ ಇದ್ದಾರೆಯೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ.

ಮೊನ್ನೆ ವಿಜಯ್‌ ಹಾಗೂ ರಶ್ಮಿಕಾ ಇಬ್ಬರೂ ಮಾಲ್ಡೀವ್ಸ್‌ಗೆ ಹೊರಟಿದ್ದಾರೆ ಎಂಬ ಸುದ್ದಿ ಹರಡಿತ್ತು. ವಿಮಾನ ನಿಲ್ದಾಣದಲ್ಲಿ ಇಬ್ಬರೂ ಬೇರೆ ಬೇರೆಯಾಗಿ ಪ್ರವೇಶಿಸುತ್ತಿರುವ ಫೋಟೊ ವೈರಲ್‌ ಆಗಿತ್ತು. ಆದರೆ ಈ ಬಗ್ಗೆ ಇಬ್ಬರೂ ಯಾವುದೇ ಹೇಳಿಕೆ ನೀಡಿರಲಿಲ್ಲ.

ಗೀತಾ ಗೋವಿಂದಂ, ಡಿಯರ್‌ ಕಾಮ್ರೆಡ್‌ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿರುವ ರಶ್ಮಿಕಾ ಹಾಗೂ ವಿಜಯ್‌ ದೇವರಕೊಂಡ ಪ್ರೀತಿಯ ಬಲೆಗೆ ಬಿದ್ದಿದ್ದಾರೆ ಎಂಬ ವದಂತಿ ಬಹಳ ಕಾಲದಿಂದಲೂ ಇದೆ. ನಟ ರಕ್ಷಿತ್‌ ಶೆಟ್ಟಿಯಿಂದ ಬೇರೆಯಾದ ಬಳಿಕ ರಶ್ಮಿಕಾ ಸಾಕಷ್ಟು ಸಲ ದೇವರಕೊಂಡ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ವದಂತಿ ಹರಡಲು ಮುಖ್ಯ ಕಾರಣ. ಆದಾಗ್ಯೂ ಇಬ್ಬರೂ ಗುಟ್ಟು ಬಿಟ್ಟುಕೊಡುತ್ತಿಲ್ಲ. ಇತ್ತೀಚೆಗಷ್ಟೆ ‘ಕಾಫಿ ವಿತ್‌ ಕರಣ್‌’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಜಯ್‌, ತಾವು ಸಿಂಗಲ್‌ ಎಂದುಕೊಂಡಿದ್ದರು.

ಇನ್ನೊಂದೆಡೆ ರಶ್ಮಿಕಾ ಕೂಡ ತಾವು ತಮ್ಮ ಹಳೆಯ ಗೆಳಯರನ್ನು ಭೇಟಿ ಮಾಡಲು, ಅವರ ಈಗಿನ ಸ್ನೇಹಿತರನ್ನು ಮಾತನಾಡಿಸಲು ಮುಜುಗರಪಡುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಹೀಗಾಗಿ ರಶ್ಮಿಕಾ–ವಿಜಯ್‌ ದೂರವಾಗಿದ್ದಾರೆ ಎಂಬ ಸುದ್ದಿಗಳೂ ಕೇಳಿಬಂದಿದ್ದವು.

ಆದರೆ ಈಗಿನ ಮಾಲ್ಡೀವ್ಸ್‌ ಪ್ರವಾಸ ಬೇರೆಯದೆ ಕಥೆ ಹೇಳುತ್ತಿದೆ. ರಶ್ಮಿಕಾ–ಅಮಿತಾಭ್‌ ಬಚ್ಚನ್‌ ಒಟ್ಟಾಗಿ ನಟಿಸಿರುವ ಬಾಲಿವುಡ್‌ ಚಿತ್ರ ‘ಗುಡ್‌ಬೈ’ ಶುಕ್ರವಾರ ತೆರೆ ಕಂಡಿದೆ. ರಶ್ಮಿಕಾ ಅಮಿತಾಭ್‌ ಅವರ ಮಗಳ ಪಾತ್ರದಲ್ಲಿ ಮಿಂಚಿದ್ದು, ಅವರ ಅಭಿಯನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು