ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನಿಗಳಿಗಾಗಿ ‘ಕುಟುಂಬದ ಫೋಟೊ‘ ಹಂಚಿಕೊಂಡ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ

Last Updated 19 ಮೇ 2022, 10:33 IST
ಅಕ್ಷರ ಗಾತ್ರ

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗಾಗಿ ತಮ್ಮ ಕುಟುಂಬದ ಪೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಕುಟುಂಬದ ಫೋಟೊವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಹಾಗೇ ಈ ಪೋಟೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದರ ನಡುವೆಯೇ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಮಾನಿಗಳ ಜತೆ ಸಕ್ರಿಯರಾಗಿರುವುದು ರಶ್ಮಿಕಾ ಅವರ ವಿಶೇಷತೆ.

ಇತ್ತೀಚಗೆ ರಶ್ಮಿಕಾ ಗೆಳತಿಯ ಮದುವೆಗಾಗಿ ಮಡಿಕೇರಿಗೆ ಆಗಮಿಸಿದ್ದರು. ಇದೇ ಅವರು ಕುಟುಂಬ ಜೊತೆ ಸಾಕಷ್ಟು ಸಮಯ ಕಳೆದಿದ್ದಾರೆ. ಮುದ್ದು ತಂಗಿ ಶಿಮನ್‌ ಜೊತೆ ಕಾಲ ಕಳೆದು ಸಂಭ್ರಮಿಸಿದ್ದಾರೆ.

ರಶ್ಮಿಕಾ ಹಂಚಿಕೊಂಡ ಸೆಲ್ಫಿ ಫೋಟೊದಲ್ಲಿ ತಂದೆ ಮದನ್ ಮಂದಣ್ಣ, ತಾಯಿ ಸುಮನ್‌ ಮಂದಣ್ಣ ಹಾಗೂ ತಂಗಿ ಶಿಮನ್‌ ಇದ್ದಾರೆ.

ಸದ್ಯ ರಶ್ಮಿಕಾ, ಬಾಲಿವುಡ್‌, ಕಾಲಿವುಡ್‌ ಹಾಗೂ ಟಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು ನಟ ವಿಜಯ್‌ ಜೊತೆಯಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇತ್ತ ಪುಷ್ಪ–2 ಸಿನಿಮಾದ ಶೂಟಿಂಗ್‌ಜುಲೈನಲ್ಲಿ ಪ್ರಾರಂಭವಾಗಲಿದೆ. ಹಿಂದಿಯ ಗುಡ್‌ಬೈ, ಮಿಷನ್‌ ಮಜ್ನು ಸಿನಿಮಾಗಳು ಬಿಡುಗಡೆ ಸಿದ್ದವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT