ಬೆಂಗಳೂರು: ‘ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ವೈದ್ಯರಿಗೆ, ಎಂಜಿನಿಯರ್ಗಳಿಗೆ, ಸಿನಿಮಾಕರ್ತೃಗಳಿಗೂ ಅಪಾಯವಾಗಿದೆ ಎಂದು ಹೇಳುತ್ತಾರೆ. ಆದರೆ ಇದೊಂದು ವರ. ಇದರ ಬಗ್ಗೆ ಜ್ಞಾನ ಹೊಂದಿರುವವರು ಅದನ್ನು ಬಳಸಿಕೊಂಡೇ ಮುಂದಿನ ಹಂತಕ್ಕೆ ಬೆಳೆಯುತ್ತಾರೆ’ ಎಂದು ಖ್ಯಾತ ಛಾಯಾಚಿತ್ರಗ್ರಾಹಕ ರತ್ನವೇಲು ಅಭಿಪ್ರಾಯಪಟ್ಟರು.

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಸೋಮವಾರ ನಡೆದ ‘ಬೆಳಕು ಭಾಷೆಯಾದಾಗ’ ಎಂಬ ಸಂವಾದದಲ್ಲಿ ಅವರು ಮಾತನಾಡಿದರು. ನಿರ್ಮಾಪಕ, ಸಂಕಲನಕಾರ ಪ್ರಶಾಂತ್ ಪಂಡಿತ್ ಸಂವಾದ ನಡೆಸಿಕೊಟ್ಟರು.

‘ಎಐ ಎಷ್ಟೇ ಮುಂದುವರಿದರೂ ಸೃಷ್ಟಿಕರ್ತರು ಇರುವವರೆಗೂ ಸಿನಿಮಾಗೆ ತೊಂದರೆಯಾಗದು. ಕ್ಯಾಮೆರಾ ಬದಲಾವಣೆಯಾಗಬಹುದು, ಅದರೊಳಗಿರುವ ಸೆನ್ಸರ್ಗಳು ಮತ್ತಷ್ಟು ಉತ್ಕೃಷ್ಟವಾಗಬಹುದು. ಆದರೆ ಸೃಷ್ಟಿಕರ್ತನಾದವನು ಯಾವತ್ತಿದ್ದರೂ ಉಳಿಯುತ್ತಾನೆ. ಎಐ ಎನ್ನುವುದನ್ನು ಇತ್ತೀಚೆಗೆ ಪ್ರಿಪ್ರೊಡಕ್ಷನ್ ಸಲಕರಣೆಯಾಗಿ ಬಳಸಲಾಗುತ್ತಿದೆ. ಕಲ್ಪನೆಯ ಲೋಕದ ಸೃಷ್ಟಿಗೆ ಇದು ಉಪಯೋಗ. ಆದರೆ ಇದು ದೃಶ್ಯರೂಪವಾಗಿ ತೆರೆ ಮೇಲೆ ಬರಲು ಇಡೀ ಸಿನಿಮಾ ತಂಡ ಬೇಕೇಬೇಕು. ಎಐಗೆ ಯಾರ ಸ್ಥಾನವನ್ನೂ ತುಂಬಲು ಸಾಧ್ಯವಿಲ್ಲ’ ಎಂದರು.

‘ನಾನು ಚಿತ್ರದ ಕಥೆಯ ಹುಟ್ಟಿನಿಂದಲೇ ನಿರ್ದೇಶಕನ ಜೊತೆಗೆ ಹೆಜ್ಜೆ ಹಾಕುತ್ತೇನೆ. ಕಥೆ ಕೈಗೆ ಸಿಕ್ಕ ಕೂಡಲೇ ಅದನ್ನು ಮನಸ್ಸಿನಲ್ಲೇ ಚಿತ್ರೀಕರಿಸಿಕೊಳ್ಳುತ್ತೇನೆ. ಅದನ್ನು ಅನುಭವಿಸುತ್ತೇನೆ. ಕಳೆದ 29 ವರ್ಷದಲ್ಲಿ ಈ ವೃತ್ತಿಯಲ್ಲಿದ್ದುಕೊಂಡು ಒಂದು ಬಾರಿ ಒಂದೇ ಸಿನಿಮಾ ಮಾಡಿಕೊಂಡು ಬಂದಿದ್ದೇನೆ. ದೊಡ್ಡ ಸಿನಿಮಾಗಳಲ್ಲಿ ಡಿಒಪಿಗೆ ಒತ್ತಡ ಜಾಸ್ತಿ. ಒಂದು ರೀತಿಯಲ್ಲಿ ಟಿ–20 ಮ್ಯಾಚ್ ಆಡುತ್ತಿರುತ್ತೇವೆ. ಛಾಯಾಚಿತ್ರಗ್ರಾಹಕರು ಯೋಜನೆ ಮಾಡಿಕೊಳ್ಳುವುದು ಬಹುಮುಖ್ಯ. ‘ರೋಬೊ’ ಸಿನಿಮಾಗೆ 3,600 ಪುಟಗಳ ಕ್ಯಾಮೆರಾ ವರದಿ ಸಿದ್ಧಪಡಿಸಿದ್ದೆ. ಇದನ್ನು ಈಗಿನ ಯುವ ಛಾಯಾಚಿತ್ರಗ್ರಾಹಕರು ಅನುಸರಿಸಬೇಕು. ಈಗಿನವರು ಚಿತ್ರರಂಗಕ್ಕೆ ಬಂದ ಮೇಲೆ ಕಲಿಯುತ್ತೇನೆ ಎನ್ನುತ್ತಾರೆ. ಇದರಿಂದಾಗಿಯೇ ಸಂಕಲನಕಾರರ ಕಂಪ್ಯೂಟರ್ಗಳಲ್ಲಿ ಲೆಕ್ಕವಿರದಷ್ಟು ದೃಶ್ಯಗಳು ತುಂಬಿಕೊಂಡಿರುತ್ತವೆ’ ಎಂದು ಅನುಭವ ಹಂಚಿಕೊಂಡರು.

ಕನ್ನಡದ ‘ಸೈನೈಡ್’ ಸಿನಿಮಾ ದಿನಗಳನ್ನು ನೆನಪಿಸಿಕೊಂಡ ಅವರು, ‘ನಾನು ‘ಆರ್ಯ’, ‘ತಿರುಮಲೈ’ಯಂಥ ಕಮರ್ಷಿಯಲ್ ಸಿನಿಮಾ ಮಾಡಿದ್ದ ಸಮಯವದು. ಎ.ಎಂ.ಆರ್. ರಮೇಶ್ ಅವರು ತಂದ ‘ಸೈನೈಡ್’ ಕಥೆ ಕುತೂಹಲಕಾರಿಯಾಗಿತ್ತು. ಆದರೆ 25 ದಿನಗಳಲ್ಲಿ ಈ ಸಿನಿಮಾ ಮುಗಿಸುವ ಸವಾಲಿತ್ತು. ಈ ಸಿನಿಮಾಗೆ ಕೇವಲ 4–5 ಲೈಟ್ಗಳನ್ನು ಬಳಸಿದ್ದೆವು. ಟ್ರಾಲಿ ಹಾಕುವ ಬಜೆಟ್ ಇರಲಿಲ್ಲ. ಸ್ಕೇಟರ್ ಬಳಸಿ ಚಿತ್ರೀಕರಣ ಮಾಡಿದ್ದೆ’ ಎಂದರು.

ನೆಗೆಟಿವ್ ಬಳಸಿ ‘ಪೆದ್ದಿ’ ಶೂಟಿಂಗ್

‘ಇತ್ತೀಚೆಗೆ ಭಾರತದಲ್ಲಿ ನೆಗೆಟಿವ್ನಲ್ಲಿ ಚಿತ್ರೀಕರಿಸಿದ ಸಿನಿಮಾಗಳೇ ಬರುತ್ತಿಲ್ಲ. ಅತ್ತ ಆಸ್ಕರ್ಗೆ ಆಯ್ಕೆಯಾಗುತ್ತಿರುವ ಬಹುತೇಕ ಸಿನಿಮಾಗಳು ಈ ಮಾದರಿಯಲ್ಲೇ ಚಿತ್ರೀಕರಿಸಿದ್ದಾಗಿರುತ್ತವೆ. ಡಿಜಿಟಲ್ನಲ್ಲಿ ಸೆರೆಹಿಡಿದ ದೃಶ್ಯಗಳು ಸುಂದರವಾಗಿ ಕಂಡರೂ ಅವುಗಳನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ.

ಆದರೆ ತನಗೆ ಬೇಕಾದಂತೆ ವಾತಾವರಣ ಸೃಷ್ಟಿಸಿಕೊಂಡು ನೆಗೆಟಿವ್ನಲ್ಲಿ ಸೆರೆಹಿಡಿಯುವ ಕೌಶಲ ಖುಷಿ ಬೇರೆಯೇ. ರಾಮ್ ಚರಣ್ ನಟನೆಯ ಹೊಸ ಸಿನಿಮಾ ‘ಪೆದ್ದಿ’ಯಲ್ಲಿ 17 ವರ್ಷಗಳ ಬಳಿಕ ಕೆಲ ದೃಶ್ಯಗಳನ್ನು ನೆಗೆಟಿವ್ನಲ್ಲಿ ಸೆರೆಹಿಡಿದಿದ್ದೇನೆ.

ಪೂರ್ಣ ಸಿನಿಮಾವನ್ನೇ ಈ ರೀತಿ ಸೆರೆಹಿಡಿಯುವ ಆಸೆ ಇತ್ತು. ಆದರೆ ಬಜೆಟ್ ಮೂರು ಪಟ್ಟು ಆಗಲಿದೆ. ‘ರಂಗಸ್ಥಳಂ’ಗಿಂತ ಭಿನ್ನವಾಗಿ ‘ಪೆದ್ದಿ’ ಇರಲಿದೆ. ಇದರ ಶೇಕಡ 80ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು ಏಪ್ರಿಲ್–ಮೇನಲ್ಲಿ ಸಿನಿಮಾ ತೆರೆಗೆ ಬರಲಿದೆ’ ಎಂದರು ರತ್ನವೇಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.