ಮಂಗಳವಾರ, ಮಾರ್ಚ್ 9, 2021
31 °C

ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಶಿಕ್ಷೆಯಾಗಬೇಕು: ರವೀನಾ ಟಂಡನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ನ ಯುವಪ್ರತಿಭೆ, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್‌ ಸಾವಿನ ರಹಸ್ಯ ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಸುಶಾಂತ್‌ ಸಾವಿನ ಹಿಂದೆಯೇ ಬಾಲಿವುಡ್‌ ಸಿನಿರಂಗದ ಡ್ರಗ್ಸ್ ಪ್ರಕರಣ ಮಾತ್ರ ಬಹಿರಂಗಗೊಂಡಿತ್ತು. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿ ದಿನಕ್ಕೊಂದು ಹೆಸರು ಕೇಳಿ ಬರುತ್ತಿದೆ. 

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಅವರನ್ನು ಬಂಧಿಸಿದ ಎನ್‌ಸಿಬಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತ್ತು. ಈಗ ಎನ್‌ಸಿಬಿ ಕೋರಿಕೆಯ ಮೇರೆಗೆ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 6ರ ವರೆಗೆ ಮುಂದುವರಿಸಿದೆ ಮುಂಬೈ ಸೆಷನ್ಸ್ ಕೋರ್ಟ್‌.

ಸದ್ಯ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು ಹಾಗೂ ಪಾರ್ಲಿಮೆಂಟ್ ಎಲ್ಲಿ ನೋಡಿದರೂ ಡ್ರಗ್ಸ್‌ನದ್ದೇ ಸುದ್ದಿ. ಈ ಸಂದರ್ಭದಲ್ಲಿ ನಟಿ ರವೀನಾ ಟಂಡನ್‌ ಡ್ರಗ್ಸ್ ಪ್ರಕರಣದ ಕುರಿತು ಮಾತನಾಡಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿರುವ ರವೀನಾ ‘ಈ ಡ್ರಗ್ಸ್ ವ್ಯವಸ್ಥೆ ಎಂಬುದು ಸಂಪೂರ್ಣ ಸ್ವಚ್ಛವಾಗಬೇಕು. ಈ ಪ್ರಕರಣವನ್ನು ಸಂಪೂರ್ಣವಾಗಿ ಬಯಲಿಗೆಳೆದು ಸ್ವಚ್ಛ ಮಾಡಲು ಇದು ಸರಿಯಾದ ಸಮಯ. ಅಲ್ಲದೇ ಇದರಿಂದ ಮುಂದಿನ ಜನಾಂಗಕ್ಕೆ ಉತ್ತಮ ಭವಿಷ್ಯ ಕಟ್ಟಿಕೊಡಲು ಸಾಧ್ಯ. ಇಂತಹ ಪ್ರಕರಣಗಳಲ್ಲಿ ಭಾಗಿಯಾಗುವ ಮೂಲಕ ವ್ಯವಸ್ಥೆಯನ್ನು ಹದಗೆಡಿಸಿರುವ ಎಲ್ಲಾ ದೊಡ್ಡ ತಲೆಗಳನ್ನು ಹಿಡಿದು ಶಿಕ್ಷಿಸಬೇಕು’ ಎಂದಿದ್ದಾರೆ.

 

 

 

ರವೀನಾ ಈ ಹಿಂದೆ ರಿಯಾ ಪರವಾಗಿ ಟ್ವೀಟ್ ಮಾಡಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ತಮ್ಮ ಬಣ್ಣ ಬದಲಿಸಿರುವ ರವೀನಾ ಡ್ರಗ್ಸ್ ಪ್ರಕರಣದ ವಿರುದ್ಧ ದನಿ ಎತ್ತಿದ್ದಾರೆ. ಈ ಬಗ್ಗೆ ನೆಟ್ಟಿಗರು ಆಶ್ವರ್ಯ ವ್ಯಕ್ತಪಡಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು