ಮಾಸ್ ಮಹಾರಾಜ ರವಿ ತೇಜಾ ಅವರು ತಮ್ಮ ಮುಂಬರುವ ಚಿತ್ರ ಸುಧೀರ್ ವರ್ಮಾ ನಿರ್ದೇಶನದ 'ರಾವಣಾಸುರ' ಎಂದು ಘೋಷಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಸಮ್ಮುಖದಲ್ಲಿ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಇದರ ಜೊತೆಗೆ, ರವಿ ತೇಜಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ 'ರಾವಣಾಸುರ'ನ ಫಸ್ಟ್ ಲುಕ್ ಅನ್ನು ಸಹ ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ರವಿ ತೇಜಾ ಅವರು ಸಿಗಾರ್ ಸೇದುತ್ತಿದ್ದು, ಮುಖ ಮತ್ತು ಕೈ ಮೇಲೆ ಗಾಯದ ಗುರುತುಗಳಿವೆ.

2020ರಲ್ಲಿ ಬಿಡುಗಡೆಯಾದ ಗೋಪಿಚಂದ್ ಮಲಿನೇನಿಯವರ ಕ್ರಾಕ್‌ನಲ್ಲಿ ರವಿತೇಜ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಇವರ ಹಲವಾರು ಸಿನಿಮಾಗಳು ಇನ್ನು ನಿರ್ಮಾಣದ ಹಂತದಲ್ಲಿವೆ. ಸಂಕ್ರಾಂತಿ ಸಂದರ್ಭದಲ್ಲಿ, ರವಿ ತೇಜಾ ತಮ್ಮ ಮುಂಬರುವ ಚಿತ್ರಕ್ಕೆ ರಾವಣಾಸುರ ಎಂದು ಹೆಸರಿಡಲಾಗಿದೆ ಎಂದು ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ್ದು, 'ಸಂಕ್ರಾಂತಿಯ ಶುಭಾಶಯಗಳು!! ರಾವಣಾಸುರ ಸಿನಿಮಾಗಾಗಿ ತುಂಬಾ ಉತ್ಸುಕರಾಗಿದ್ದೇನೆ' ಎಂದು ಬರೆದಿದ್ದಾರೆ. ಸೆಪ್ಟೆಂಬರ್ 30, 2022 ರಂದು ಚಿತ್ರ ಬಿಡುಗಡೆಯಾಗಲಿದೆ.

ರಾವಣಾಸುರ ಚಿತ್ರದಲ್ಲಿ ರವಿ ತೇಜಾ ಅವರ ಜೊತೆಗೆ ಸುಶಾಂತ್, ಅನು ಎಮ್ಯಾನುಯೆಲ್, ಮೇಘಾ ಆಕಾಶ್, ಫರಿಯಾ ಅಬ್ದುಲ್ಲಾ, ದಕ್ಷಾ ನಗರ್‌ಕರ್ ಮತ್ತು ಪೂಜಿತಾ ಪೊನ್ನಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜನವರಿಯಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

ಚಿತ್ರವನ್ನು ಅಭಿಷೇಕ್ ನಾಮಾ ಅವರು ಅಭಿಷೇಕ್ ಪಿಕ್ಚರ್ಸ್, ಆರ್‌ಟಿ ಟೀಮ್‌ವರ್ಕ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದು, ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶ್ರೀಕಾಂತ್ ವಿಸ್ಸಾ ಬರೆದಿದ್ದಾರೆ. ಚಿತ್ರಕ್ಕೆ ಹರ್ಷವರ್ಧನ್ ರಾಮೇಶ್ವರ್ ಮತ್ತು ಭೀಮ್ ಸಂಗೀತ ನೀಡಲಿದ್ದಾರೆ. ಛಾಯಾಗ್ರಹಣ ವಿಜಯ್ ಕಾರ್ತಿಕ್ ಕಣ್ಣನ್ ಮತ್ತು ಸಂಕಲನ ಶ್ರೀಕಾಂತ್ ತಂಡದ ಭಾಗವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.